ಮುಸ್ಲಿಂ ಮಹಿಳೆಯರಿಗೆ ಬಂಪರ್ ಕೊಡುಗೆ
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಪ ಸಂಖ್ಯಾತರ ಮತ ಬೇಟೆಗೆ ಮುಂದಾಗಿರುವ ರಾಜ್ಯ ಸರ್ಕಾರ ಮುಸ್ಲಿಂ..
ಬೆಂಗಳೂರು: ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಪ ಸಂಖ್ಯಾತರ ಮತ ಬೇಟೆಗೆ ಮುಂದಾಗಿರುವ ರಾಜ್ಯ ಸರ್ಕಾರ ಮುಸ್ಲಿಂ ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದೆ. ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗೆ ಹಾಗೂ ಮರು ಮದುವೆಯಾಗುವವರಿಗೆ ಸೋಮವಾರ 50 ಸಾವಿರ ರುಪಾಯಿ ಘೋಷಿಸಿದೆ.
1 ಲಕ್ಷದ 50 ಸಾವಿರ ರುಪಾಯಿಗಿಂತ ಕಡಿಮೆ ವಾರ್ಷಿಕ ಆದಾಯವಿರುವ ಕುಟುಂಬದ ಮಹಿಳೆಯರು ತಮ್ಮ ಮದುವೆ ಆಮಂತ್ರಣ ಪತ್ರಿಕೆ ನೀಡಿ, 50 ಸಾವಿರ ರುಪಾಯಿ ಪಡೆದುಕೊಳ್ಳಲು ರಾಜ್ಯ ಅಲ್ಪ ಸಂಖ್ಯಾತ ಇಲಾಖೆ ಇಂದು ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013-14ನೇ ಸಾಲಿನ ಬಜೆಟ್ನಲ್ಲಿ ಮುಸ್ಲಿಂ ಸಮುದಾಯಕ್ಕೆ ವಿಶೇಷ ಯೋಜನೆ ಪ್ರಕಟಿಸಿದ್ದರು. ಇದೀಗ ಬಜೆಟ್ನಲ್ಲಿ ಘೋಷಿಸಿದ್ದ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಮುಸ್ಲಿಂ ಮಹಿಳೆಯರು ಮಂಚ, ಹಾಸಿಗೆ ಹಾಗೂ ಅಡುಗೆ ಪಾತ್ರೆ ಖರೀದಸಲು 35 ಸಾವಿರ ರುಪಾಯಿ ಮತ್ತು ಉಳಿದ 15 ಸಾವಿರ ಚೆಕ್ ಪಡೆದುಕೊಳ್ಳಬಹುದಾಗಿದೆ.