ಆರ್‌ಬಿಐ ರೆಪೋ ದರ ಮತ್ತೆ ಶೇ.025ರಷ್ಟು ಹೆಚ್ಚಳ
ರಿಸರ್ವೆ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಮಂಗಳವಾರ ತನ್ನ ಎರಡನೇ ತ್ರೈಮಾಸಿಕ..
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಮಂಗಳವಾರ ತನ್ನ ಎರಡನೇ ತ್ರೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ಮತ್ತೆ ರೆಪೋ ದರ ಶೇ.0.25ರಷ್ಟು ಹೆಚ್ಚಳ ಮಾಡಿದೆ. ಇದರಿಂದ ಸಾಲದ ಮೇಲಿನ ಬಡ್ಡಿ ದರ ಮತ್ತೆ ಹೆಚ್ಚಾಗಲಿದೆ. ಹೀಗಾಗಿ ಎಂದಿನಂತೆಯೇ ಇಎಂಐ (ಪ್ರತಿ ತಿಂಗಳ ಸಮಾನ ಕಂತಿನ ಮೊತ್ತ) ಪ್ರಮಾಣ ಸಹ ಹೆಚ್ಚಾಗಲಿದೆ.
ರೆಪೋ ದರವನ್ನು 7.50ರಿಂದ 7.75ಕ್ಕೆ ಏರಿಸಲಾಗಿದೆ. ಆದರೆ ನಗದು ಮೀಸಲು ಅನುಪಾತ(ಸಿಆರ್‌ಆರ್)ದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರು ತಿಳಿಸಿದ್ದಾರೆ.
ಕಳೆದ ತಿಂಗಳು ತನ್ನ ಮೊದಲನೆ ತ್ರೈಮಾಸಿಕ ಹಣಕಾಸು ನೀತಿಯಲ್ಲಿ ರಘುರಾಮ್ ರಾಜನ್ ಅವರು, ಏಕಾಏಕಿ ರೆಪೋ ದರವನ್ನು ಶೇ.0.25ರಷ್ಟು ಹೆಚ್ಚಿಸಿದ್ದರು. ಇದೀಗ ಹಣದುಬ್ಬರದ ಹಿನ್ನೆಲೆಯಲ್ಲಿ ಮತ್ತೆ ರೆಪೋ ದರ ಏರಿಕೆ ಮಾಡಿ, ಗ್ರಾಹಕರಿಗೆ ಶಾಕ್ ನೀಡಿದ್ದಾರೆ.
ಹಣದುಬ್ಬರ ಕಳೆದ ಆಗಸ್ಟ್‌ನಲ್ಲಿ 6.1, ಜುಲೈನಲ್ಲಿ 5.85 ಹಾಗೂ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 8.07ರಷ್ಟು ಇತ್ತು.