ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ನೀರ್ ದೋಸೆ' ವಿವಾದ: ಅಂಬರೀಷ್ ಮಧ್ಯಸ್ಥಿಕೆಗೆ ರಮ್ಯಾ ಆಗ್ರಹ

ವಿಜಯ್ ಪ್ರಸಾದ್ ನಿರ್ದೇಶನದ, ನವರಸ ನಾಯಕ ಜಗ್ಗೇಶ್ ಹಾಗೂ ನಟಿ, ಹಾಲಿ ಸಂಸದೆ ರಮ್ಯಾ ಅಭಿನಯದ 'ನೀರ್ ದೋಸೆ' ವಿವಾದ

Lingaraj Badiger
Updated On : 29 Oct 2013, 1:26 am

ಬೆಂಗಳೂರು: ವಿಜಯ್ ಪ್ರಸಾದ್ ನಿರ್ದೇಶನದ, ನವರಸ ನಾಯಕ ಜಗ್ಗೇಶ್ ಹಾಗೂ ನಟಿ, ಹಾಲಿ ಸಂಸದೆ ರಮ್ಯಾ ಅಭಿನಯದ 'ನೀರ್ ದೋಸೆ' ವಿವಾದ ಇದೀಗ ವಸತಿ ಸಚಿವ ಅಂಬರೀಷ್ ಅಂಗಳಕ್ಕೆ ಬಂದು ನಿಂತಿದೆ.

ಈ ಬಗ್ಗೆ ಮಂಗಳವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, ನೀರ್ ದೋಸೆ ವಿವಾದ ಸಂಬಂಧ ಅಂಬರೀಷ್ ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಈ ಕುರಿತು ಅಂಬರೀಷ್ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂದು ಹೇಳಿದ್ದಾರೆ.

ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ನಾನು ಒಪ್ಪಿಕೊಂಡಿದ್ದೆ ಮತ್ತು ಈ ಸಂಬಂಧ ಜುಲೈನಲ್ಲೇ ಡೇಟ್ ಸಹ ಕೊಟ್ಟಿದ್ದೆ. ಅಲ್ಲದೆ ನನ್ನ ಭಾಗದ ಚಿತ್ರೀಕರಣ ಮುಗಿಸಿಕೊಡುವಂತೆ ನಿರ್ದೇಶಕರಿಗೆ ಹಲವು ಬಾರಿ ಫೋನ್ ಮೂಲಕ ಕೇಳಿಕೊಂಡಿದ್ದೆ. ಆಗ ಚಿತ್ರೀಕರಣ ಮಾಡದೆ ಸುಮ್ಮನಿದ್ದು, ಈಗ ಬಂದಿದ್ದಾರೆ. ಆದರೆ ಈಗ ನನಗೆ ಸಾಧ್ಯವಿಲ್ಲ ಎಂದು ರಮ್ಯಾ ಕಿಡಿಕಾರಿದ್ದಾರೆ.

ಇದೇ ವೇಳೆ ಮಂಡ್ಯ ಜಿಲ್ಲಾ ಕಾಂಗ್ರೆಸ್‌ನಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸದ ರಮ್ಯಾ, ಮಂಡ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲ ಒಟ್ಟಾಗಿದ್ದೇವೆ ಎಂದಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ರಮ್ಯಾ ವಿರುದ್ಧ ಚಿತ್ರದ ನಾಯಕ ನಟ ಜಗ್ಗೇಶ್ ಅವರು ವಾಗ್ದಾಳಿ ನಡೆಸಿದ್ದರು. ಮನುಷ್ಯ ಎಷ್ಟೇ ದೊಡ್ಡವನಾಗಿ ಬೆಳೆದರೂ ತಾನು ನಡೆದು ಬಂದ ದಾರಿ ಮತ್ತು ವೃತ್ತಿಯನ್ನು ಮರೆಯಬಾರದು ಎಂದಿದ್ದರು. ಜಗ್ಗೇಶ್ ಈ ರೀತಿ ರಮ್ಯಾ ಮೇಲೆ ಗರಂ ಆಗಲು ಈ ನೀರ್ ದೋಸೆ ಚಿತ್ರವೇ ಕಾರಣ.

'ನೀರ್‌ದೋಸೆ' ಚಿತ್ರದಲ್ಲಿ ರಮ್ಯಾ ನಾಯಕಿಯಾಗಿದ್ದು, ಕೆಲವು ದಿನ ನಟಿಸಿದ್ದಾರೆ ಕೂಡಾ. ಸದ್ಯ ರಮ್ಯಾ ಸಂಸದೆಯಾಗಿದ್ದು, 'ನೀರ್‌ದೋಸೆ' ಚಿತ್ರದಲ್ಲಿ ಮುಂದೆ ನಟಿಸುತ್ತಿಲ್ಲ ಎಂಬ ಸುದ್ದಿಗಳು ಕೇಳಿಬಂದಿದ್ದವು. ಇದರಿಂದ ಜಗ್ಗೇಶ್‌ ಗರಂ ಆಗಿದ್ದು, ಟ್ವೀಟರ್‌ನಲ್ಲಿ ತಮ್ಮ ಅಸಮಾಧಾನವನ್ನು ತೋಡಿಕೊಳ್ಳಲಾರಂಭಿಸಿದ್ದರು. ಆದರೆ, ಶನಿವಾರ ನೇರವಾಗಿ ಮಾಧ್ಯಮಗಳಲ್ಲಿ ರಮ್ಯಾ ಮೇಲಿನ ಅಸಮಾಧಾನ ತೋಡಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement