ವಾಯುಪಡೆ ಮುಖ್ಯಸ್ಥರಾಗಿ ಅರುಪ್ ರಹಾ ನೇಮಕ
ನವದೆಹಲಿ: ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅರುಪ್ ರಹಾ ಅವರು ನೇಮಕಗೊಂಡಿದ್ದಾರೆ.
ಡಿಸೆಂಬರ್ 31ರಂದು ಹಾಲಿ ವಾಯುಪಡೆ ಮುಖ್ಯಸ್ಥ ನಾಕ್ ಬ್ರೌನೆ ಅವರು ನಿವೃತ್ತರಾಗಲಿದ್ದು ಅವರ ಸ್ಥಾನಕ್ಕೆ ಅರುಪ್ ರಹಾ ನೇಮಕಗೊಂಡಿದ್ದಾರೆ. 1954ರ ಡಿಸೆಂಬರ್ 26ರಂದು ಜನಿಸಿದ 59ರ ಹರೆಯದ ರಹಾ ಅವರು ವಾಯುಪಡೆ ಮುಖ್ಯಸ್ಥರಾಗಿ ಮೂರು ವರ್ಷಗಳ ಕಾಲ ಮುಂದುವರಿಯುವ ನಿರೀಕ್ಷೆ ಇದೆ.
ಪ್ರಸ್ತುತ ವಾಯುಪಡೆ ಉಪ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ರಹಾ ಅವರನ್ನು ವಾಯುಪಡೆಯ ಮುಖ್ಯಸ್ಥರನ್ನಾಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ.