ಅಸಾರಾಂ ಬಾಪು ಲೈಂಗಿಕವಾಗಿ ಸಮರ್ಥ: ಪೊಲೀಸ್
16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ..
ಜೊಧ್‌ಪುರ: 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು, ಲೈಂಗಿಕವಾಗಿ ಸಮರ್ಥರಾಗಿದ್ದು, ಅವರು ಪುರುಷತ್ವ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಅಸಾರಾಂ ಬಾಪು ಅವರಿಗೆ ನರ ದೌರ್ಬಲ್ಯ ಇದ್ದು, ಅವರು ನರಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದರ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಎಸ್‌ಎನ್ ಮೆಡಿಕಲ್ ಕಾಲೇಜ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.
ಪುರುಷತ್ವ ಪರೀಕ್ಷೆಯಲ್ಲಿ ಅಸಾರಾಂ ಬಾಪು ಅವರು ಪೂರ್ಣ ಪ್ರಮಾಣದಲ್ಲಿ ಆರೋಗ್ಯವಾಗಿದ್ದು, ಅವರ ಎಲ್ಲಾ ಅವಯುವಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ವೈದ್ಯಕೀಯ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಅಸಾರಾಂ ಬಾಪು ವಿಚಾರಣೆಗೆ ಅರ್ಹರಾಗಿದ್ದು, ಶೀಘ್ರವೇ ಪೊಲೀಸರು ಅವರ ವಿರುದ್ಧ ಜಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆ ಇದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಸಕಾರಾತ್ಮಕ ವರದಿ ಬಂದಿದ್ದು, ಇದು ಅಸಾರಾಂ ಬಾಪು ವಿರುದ್ಧದ ತನಿಖೆಯಲ್ಲಿ ಪ್ರಬಲ ಸಾಕ್ಷಿಯಾಗಲಿದೆ ಎಂದು ಜೊಧ್‌ಪುರ ಪೊಲೀಸ್ ಆಯುಕ್ತ ಬಿಜುಜಾರ್ಜ್ ಜೋಸೆಫ್ ತಿಳಿಸಿದ್ದಾರೆ.