ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಐಂದ್ರಿತಾ ರೇ ವಿರುದ್ಧ ನಿರ್ದೇಶಕರ ಸಂಘಕ್ಕೆ ದೂರು

Vishwanath S
Updated On : 2 Sept 2013, 7:35 am

ಬೆಂಗಳೂರು: ನಟಿ ಐಂದ್ರಿತಾ ರೇಯವರು ತಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿರುವ ಬರ್ಫಿ ಚಿತ್ರದ ನಿದೇಶಕ ಶೇಕರ್ ಅವರು ಸೋಮವಾರ ಐಂದ್ರಿತಾ ವಿರುದ್ಧ ಕನ್ನಡ ನಿರ್ದೇಶಕರ ಸಂಘಕ್ಕೆ ದೂರು ನೀಡಿದ್ದಾರೆ.

ಬರ್ಫಿ ಚಿತ್ರದ ನಾಯಕಿಯಾಗಿರುವ ಐಂದ್ರಿತಾ ಅವರು ಚಿತ್ರದ ಪ್ರೋಮೋದ ಟ್ರೈಲರ್‌ನಲ್ಲಿ ತನ್ನ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ, ತಮ್ಮನ್ನು ನಿಂದಿಸಿದ್ದಾರೆ ಎಂದು ಶೇಖರ್ ದೂರಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ಶೇಖರ್, ಎಲ್ಲಿಯೂ ನಾವು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಯುಟ್ಯೂಬ್‌ನಲ್ಲಿ ಬಿಡಲಾಗಿರುವ ಪ್ರೋಮೋದಲ್ಲೂ ಸಹ ಅವರ ಹೆಸರನ್ನು ಮ್ಯೂಟ್ ಮಾಡಲಾಗಿದೆ. ಆದರೂ ಐಂದ್ರಿತಾ ಅವರು ಏಕಾಏಕಿ ನನಗೆ ಕಾಲ್ ಮಾಡಿ 'ಬಾಸ್ಟೆಡ್‌' ಎಂದು ನಿಂದಿಸಿದ್ದಾರೆ. ಇದರಿಂದ ತಮ್ಮ ಮನಸ್ಸಿಗೆ ನೋವಾಗಿದೆ. ಆದ್ದರಿಂದ ಐಂದ್ರಿತಾ ಅವರು ತಮ್ಮಲ್ಲಿ ಕ್ಷಮೆ ಕೇಳಬೇಕು ಎಂದು ಶೇಖರ್ ಒತ್ತಾಯಿಸಿದ್ದಾರೆ.

ಬರ್ಫಿ ಚಿತ್ರಕ್ಕೆ ಸಂಬಂಧಿಸಿದಂತೆ ಐಂದ್ರಿತಾ ರೇ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಅಲ್ಲದೆ ಅವರನ್ನು ಯಾವುದೇ ರೀತಿಯಲ್ಲೂ ಕೆಟ್ಟದಾಗಿ ಬಿಂಬಿಸಿಲ್ಲ, ಹಾಗೊಂದು ಪಕ್ಷ ಅವರನ್ನು ಕೆಟ್ಟದಾಗಿ ಬಿಂಬಿಸಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಸವಾಲಾಕಿದ್ದಾರೆ. ನನ್ನ ಚಿತ್ರದಲ್ಲಿ ನಾಯಕಿಯನ್ನು ಉತ್ತಮವಾಗಿಯೆ ತೊರಿಸಿದ್ದೇನೆ ಹೊರತು ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿಲ್ಲ. ನಟಿ ಐಂದ್ರಿತಾ ಅವರು ಒಬ್ಬ ನಿರ್ದೇಶಕನಿಗೆ ಗೌರವ ಕೊಡದೆ ತಮ್ಮನ್ನು ಬಾಸ್ಟಡ್ ಎಂದು ನಿಂದಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಇದು ಪಬ್ಲಿಸಿಟಿ ಗಿಮಿಕ್: ಐಂದ್ರಿತಾ
ಚಿತ್ರದ ಪ್ರೋಮೋದಲ್ಲಿ ಹೆಸರು ದುರ್ಬಳಕೆ ಸಂಬಂಧ ಚಿತ್ರದ ನಿರ್ದೇಶಕ ಶೇಖರ್ ಅವರನ್ನು ನಾನು ಯಾವುದೇ ರೀತಿಯಾಗಿ ನಿಂದಿಸಿಲ್ಲ. ಇದೆಲ್ಲಾ ಪಬ್ಲಿಸಿಟಿ ಗಿಮಿಕ್‌ಗಾಗಿ ನಿರ್ದೇಶಕರು ಈ ರೀತಿ ಆರೋಪಿಸಿದ್ದಾರೆ. ಈ ಆರೋಪದಲ್ಲಿ ಹುರುಳಿಲ್ಲ. ಹೀಗಾಗಿ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ನನ್ನ ಬಳಿ ನಿರ್ದೇಶಕರ ಮೊಬೈಲ್ ನಂಬರ್ ಸಹ ಇಲ್ಲ. ಹೀಗಾಗಿ ನಾನು ಅವರನ್ನು ನಿಂದಿಸಿದ್ದೇನೆ ಎನ್ನುವುದು ಬರೀ ಮಿಥ್ಯ ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ.

ಕಳೆದ ವಾರವಷ್ಟೆ ನಟ ದಿಗಂತ್ ಹಾಗೂ ಭಾಮಾ ಅಭಿನಯದ ಬರ್ಫಿ ಚಿತ್ರ ತೆರೆ ಕಂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement