ಡಾಲರ್ ಎದುರು ಮತ್ತೆ ಕುಸಿದ ರುಪಾಯಿ
ಡಾಲರ್ ಎದುರು ಮತ್ತೆ ಕುಸಿತ ಕಂಡಿರುವ ರುಪಾಯಿ ಮೌಲ್ಯ ಸೋಮವಾರ ಪ್ರತಿ ಡಾಲರ್ಗೆ ರು. 66.15 ತಲುಪಿದೆ.
ನವದೆಹಲಿ: ಡಾಲರ್ ಎದುರು ಮತ್ತೆ ಕುಸಿತ ಕಂಡಿರುವ ರುಪಾಯಿ ಮೌಲ್ಯ ಸೋಮವಾರ ಪ್ರತಿ ಡಾಲರ್ಗೆ ರು. 66.15 ತಲುಪಿದೆ.
ಡಾಲರ್ಗೆ ಬೇಡಿಕೆ ಹೆಚ್ಚಾಗಿರುವುದರಿಂದ ಇಂದು ಷೇರುಪೇಟೆ ವಹಿವಾಟು ಆರಂಭದಲ್ಲೇ 45 ಪೈಸೆಯಷ್ಟು ಕುಸಿತಕಂಡಿದ್ದು, ಪ್ರತಿ ಡಾಲರ್ಗೆ ರು. 66.15 ಕ್ಕೆ ಕುಸಿದಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರ ಭರವಸೆಯ ಮೇರೆಗೆ ಅಲ್ಪ ಚೇತರಿಕೆ ಕಂಡಿದ್ದ ರುಪಾಯಿ ಮೌಲ್ಯ ಶುಕ್ರವಾರ 65.70ಕ್ಕೆ ಅಂತ್ಯ ಕಂಡಿತ್ತು. ಆದರೆ, ಇಂದು 65.70 ರಿಂದ 66.15ಕ್ಕೆ ಕುಸಿದಿದೆ.