ಎನ್‌ಡಿಬಿಎಫ್‌ನ 2 ಉಗ್ರರ ಹತ್ಯೆಗೈದ ಕೋಬ್ರಾ ಪಡೆ
ಬೊನ್ಗೈಗನ್(ಅಸ್ಸಾಂ): ನಕ್ಸಲ್ ನಿಗ್ರಹ ದಳ(ಸಿಆರ್‌ಪಿಎಫ್)ದ ಕೋಬ್ರಾ ಕಮಾಂಡೊಗಳು ನಡೆಸಿದ ಎನ್‌ಕೌಂಟರ್‌ಗೆ ಬೋಡೊಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎಫ್‌ಬಿ)ಕ್ಕೆ ಸೇರಿದ ಇಬ್ಬರು ಉಗ್ರರರು ಬಲಿಯಾಗಿದ್ದಾರೆ.
ದಾಲಿಗಾನ್ ಪೊಲೀಸ್ ಠಾಣೆಯ ಸಮೀಪದ ಖಾಗ್ರಾಬಿರಿ ಎಂಬಲ್ಲಿ ಇಬ್ಬರು ಅಪರಿಚಿತ ಉಗ್ರರನ್ನು ಕೋಬ್ರಾ ಪಡೆಯ ಸಿಬ್ಬಂದಿ ಹತ್ಯೆ ಮಾಡಿದ್ದು, ಇವರು ಎನ್‌ಡಿಬಿಎಫ್‌ಗೆ ಸೇರಿದ ಉಗ್ರರಾಗಿರಬಹುದೆಂದು ಸಿಆರ್‌ಪಿಎಫ್ ಅಧಿಕಾರಿಗಳು ಶಂಕಿಸಿದ್ದಾರೆ.
ರೌಮರಿ-ಚಂಪಗುರಿ ಜಿಲ್ಲೆಯಲ್ಲಿ ಇಂಜಿನಿಯರ್ ಓರ್ವನನ್ನು ಅಪಹರಿಸಲು ಎನ್‌ಡಿಎಫ್‌ಬಿನ ನಾಲ್ಕೈದು ಜನರ ತಂಡ ಸಂಚು ರೂಸಿತ್ತು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕೋಬ್ರಾ ಕಮಾಂಡೊಗಳು, ಕಳೆದ ರಾತ್ರಿಯೇ ಖಾಗ್ರಾಬರಿ ಎಂಬಲ್ಲಿಗೆ ತೆರಳಿ, ಅಡಗಿ ಕುಳಿತಿದ್ದ ಉಗ್ರರ ಮೇಲೆ ದಾಳಿ ನಡೆಸಿ, ಇಬ್ಬರನ್ನು ಹತ್ಯೆ ಮಾಡಿದ್ದಾರೆ. ಅಲ್ಲದೆ ಗುಂಪಿನಲ್ಲಿದ್ದ ಮತ್ತೆ ಕೆಲವರು ಘಟನಾ ಸ್ಥಳದಿಂದ ತಪ್ಪಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಉಗ್ರರು ಬಳಸುತ್ತಿದ್ದ ಒಂದು ಪಿಸ್ತೂಲ್ ಹಾಗೂ ಗ್ರಾನೈಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೃತದೇಹಗಳ ಗುರುತು ಪತ್ತೆಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.