ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

2017ರವರೆಗೆ ಗುಜರಾತ್ ಜನತೆಯ ಸೇವೆ ಮಾಡುತ್ತೇನೆ: ಮೋದಿ

ಗುಜರಾತ್ ಜನತೆ ನನ್ನನ್ನು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ನಾನು 2017ರವರೆಗೆ...

Vishwanath S
Updated On : 5 Sept 2013, 3:35 am

ಅಹಮದಾಬಾದ್: ಗುಜರಾತ್ ಜನತೆ ನನ್ನನ್ನು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ನಾನು 2017ರವರೆಗೆ ಇಲ್ಲಿನ ಜನತೆಯ ಸೇವೆ ಮಾಡುತ್ತೇನೆ ಎಂದು ಗುಜರಾತ್ ಮುಖ್ಮಮಂತ್ರಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಗಾಂಧಿನಗರ ಶಾಲೆಯೊಂದರಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಮೋದಿ, ನನಗೆ ಪ್ರಧಾನಿಯಾಗುವ ಹೆಬ್ಬಯಕೆ ಇಲ್ಲ. 2012ರ ವಿಧಾನಸಭೆ ಚುನಾವಣೆಯಲ್ಲಿ ಗುಜರಾತ್ ಜನತೆ ನನ್ನನ್ನು ಮತ್ತೆ ಆಯ್ಕೆ ಮಾಡಿದ್ದಾರೆ. 2017ರವರೆಗೆ ಇಲ್ಲಿನ ಜನತೆಯ ಸೇವೆ ಮಾಡಿ ಋಣ ತೀರಿಸುತ್ತೇನೆ. ಅದೊಂದೆ ನನ್ನ ಗುರಿ ಅದನ್ನು ಬಿಟ್ಟು ಮತ್ಯಾವ ಮಹಾದಾಸೆ ನನಗೆ ಇಲ್ಲ. ಹೀಗಾಗಿ ನಾನು ಪ್ರಧಾನಿ ಆಗುವ ಕನಸು ಕಾಣುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ನನಗೆ ಮುಂದೆ ಏನಾಗಬೇಕೆಂಬ ಉದ್ದೇಶವಿಲ್ಲ. ಆದರೆ ಇಲ್ಲಿನ ಜನತೆಯ ಸೇವೆ ಮಾಡುವ ಬಯಕೆ ಇದೆ. ನಾನು ಮುಂದೆ ಪ್ರಧಾನಿ ಆಗುವ ಕನಸು ಕಾಣುತ್ತಿಲ್ಲ. ಆದರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಏನಾದರು ಮಹತ್ವದನ್ನು ಸಾಧಿಸುವ ಕನಸು ಕಾಣುತ್ತಿದ್ದೇನೆ ಎಂದರು.

ಪಕ್ಷ ನನ್ನನ್ನು ಲೋಕಸಭೆಯ ಚುನಾವಣೆಯ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದು, ನಾನು ಪಕ್ಷವನ್ನು ಅಧಿಕಾರಕ್ಕೆ ತರಲು ಸರ್ವ ಪ್ರಯತ್ನಗಳನ್ನು ಮಾಡುತ್ತೇನೆ ಹೊರತು ಪ್ರಧಾನಿಯಾಗುವ ಕನಸು ಕಾಣುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement