ಎನ್ಆರ್ಎಚ್ಎಂ ಹಗರಣದ ದಾಖಲೆ ನಾಪತ್ತೆ: ಸಿಬಿಐ
ಮುಜಾಫರ್ನಗರ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಸಂಸ್ಥೆ(ಎನ್ಆರ್ಎಚ್ಎಂ)ಯ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳು ನಾಪತ್ತೆಯಾಗಿದ್ದು, ಈ ಸಂಬಂಧ ಗುರುವಾರ ಕೇಂದ್ರಿಯ ತನಿಖಾ ಸಂಸ್ಥೆ(ಸಿಬಿಐ) ಎಫ್ಐಆರ್ ದಾಖಲಿಸಿದೆ.
ಔಷಧಿ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ, 2008 ರಿಂದ 2011ರಲ್ಲಿ ಜಿಲ್ಲಾ ಆಸ್ಪತ್ರೆಯು ಖರೀದಿಸಿದ್ದ ಔಷಧಿಗಳಿಗೆ ಸಂಬಂಧಿಸಿದ ಕೆಲವೊಂದು ದಾಖಲೆಗಳು ಕಾಣೆಯಾಗಿರುವುರಿಂದ ಸಿಬಿಐ ಎಫ್ಐಆರ್ ದಾಖಲಿಸಿದೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ವಿ.ಕೆ ಜೋಹ್ರಿ ತಿಳಿಸಿದ್ದಾರೆ.
ಎಫ್ಐಆರ್ನಲ್ಲಿ ಮುಜಾಫರನಗರ ಜಿಲ್ಲಾ ಆಸ್ಪತ್ರೆಯ ನಿವೃತ್ತ ವೈದ್ಯಾಧಿಕಾರಿಗಳಾದ ಉಮೇಶ್ ಶಾರ್ಮಾ, ಆನಂದ್ ಸ್ವರೂಪ್, ಅಶೋಕ್ ಮಿಶ್ರ ಹಾಗೂ ಉಪ ವೈದ್ಯಾಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಹೆಸರುಗಳಿವೆ ಎಂದು ಜೋಹ್ರಿ ಹೇಳಿದ್ದಾರೆ.