ಅಸಾರಾಂನ ಕಾಮುಕ ಕೃತ್ಯಗಳ ವಿಡಿಯೊ ಬಯಲು
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ವಯಂ ಘೋಷಿತ..
ಜೊಧ್‌ಪುರ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುವಿನ ಮತ್ತಷ್ಟು ಲೈಂಗಿಕ ಕೃತ್ಯಗಳು ಶುಕ್ರವಾರ ಬಯಲಾಗಿವೆ.
ಪ್ರಕರಣ ಸಂಬಂಧ ಜೊಧ್‌ಪುರ ಪೊಲೀಸರ ವಶದಲ್ಲಿರುವ ಅಸಾರಾಂ ಆಪ್ತ ಶಿವನ ಮೊಬೈಲ್‌ನಲ್ಲಿ ಬಾಪುವಿನ ಕಾಮುಕ ಕೃತ್ಯಗಳ ವಿಡಿಯೊಗಳು ಪತ್ತೆಯಾಗಿವೆ. ವಿಡಿಯೊದಲ್ಲಿ ಅಸಾರಾಂ ಬಾಪು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯಗಳಿದ್ದು, ಅವುಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸಾಮಾನ್ಯ ಕೈದಿಯಂತೆ ಪರಿಗಣಿಸಿ: ಕೇಂದ್ರ
ಅಸಾರಾಂ ಬಾಪುನನ್ನು ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ಪರಿಗಣಿಸಿ ಎಂದು ರಾಜಸ್ಥಾನ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ. ಅಲ್ಲದೆ ಪತ್ರದಲ್ಲಿ ಅಸಾರಾಂ ಬಾಪು ಸಂತನಲ್ಲ ಎಂದು ಹೇಳಿದೆ.