ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜ್ಞಾನಭಾರತಿ ಗ್ಯಾಂಗ್‌ರೇಪ್: ಕಾಮುಕರಿಗೆ ಜೀವಾವಧಿ ಶಿಕ್ಷೆ

ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ನಗರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲೆ ನಡೆದ ..

Lingaraj Badiger
Updated On : 6 Sept 2013, 4:01 am

ಬೆಂಗಳೂರು: ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ನಗರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರು ಅಪರಾಧಿಗಳಿಗೆ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ವಿಶೇಷವೆಂದರೆ ಪ್ರಕರಣ ನಡೆದು ಒಂದು ವರ್ಷದೊಳಗೆ ಕಾಮುಕರಿಗೆ ಶಿಕ್ಷೆ ವಿಧಿಸಿದ್ದು ಇತಿಹಾಸವಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಐದನೇ ತ್ವರಿತಗತಿ ನ್ಯಾಯಾಲಯ ಇಂದು ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ರಾಮನಗರ ಜಿಲ್ಲೆ ಕೈಲಾಂಚ ಹೊಬಳಿ ಮೆಟ್ಟಾಕದೊಡ್ಡಿಯ ಶಿವಣ್ಣ(20), ಯಳಯಯ್ಯ (23), ಈರ(20), ದೊಡ್ಡೀರಯ್ಯ(19), ಮದ್ದೂರ(20), ಮತ್ತು ರಾಮ(21)ನಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಸಾವಿರ ರುಪಾಯಿ ದಂಡ ವಿಧಿಸಿದೆ. ಅಲ್ಲದೆ ಅತ್ಯಾಚಾರಕ್ಕೆ ಒಳಗಾದ ಯುವತಿಗೆ 50 ಸಾವಿರ ರುಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. ಇನ್ನು ಪ್ರಕರಣದಲ್ಲಿ ಮತ್ತೊಬ್ಬ ಬಾಲಪರಾಧಿಯಾಗಿದ್ದು, ಆತನ ವಿಚಾರಣೆ ಬಾಲಪರಾಧ ನ್ಯಾಯಮಂಡಳಿಯಲ್ಲಿ ನಡೆಯುತ್ತಿದ್ದು, ಮೂರು ವರ್ಷ ಜೈಲು ಶಿಕ್ಷೆ ಯಾಗುವ ಸಾಧ್ಯತೆ ಇದೆ.

ಕಾಮುಕರು  ಶ್ರೀಗಂಧ ಮತ್ತು ಸಾಮಾನ್ಯ ಮರಗಳನ್ನು ಕಡಿದು ಸಾಗಿಸುವುದನ್ನು ಮಾಡುತ್ತಿದ್ದರು. ಮದ್ಯ ಸೇವನೆ, ಮಾದಕ ವ್ಯಸನ ಮಾಡುತ್ತಿದ್ದ ಅಪರಾಧಿಗಳು ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಬಳಿ ಇದ್ದ ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದರು. ದುಷ್ಕರ್ಮಿಗಳ ಸ್ಕೇಚ್ ಹಾಗೂ ಯುವತಿಯಿಂದ ಕದ್ದೊಯ್ದಿದ್ದ ಪೋನ್ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಘಟನೆ: ನೇಪಾಳ ಮೂಲದ 21 ವರ್ಷದ ಯುವತಿ ಜ್ಞಾನಭಾರತಿ ಆವರಣದಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ದ್ವಿತೀಯ ವರ್ಷದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ಹೊಂದಿಕೊಂಡತೆ ಇರುವ ಹಾಸ್ಟೇಲ್ನಲ್ಲಿ ವಾಸಿಸುತ್ತಿದ್ದಳು. ಅ.13ರ ರಾತ್ರಿ ತನ್ನ ಗೆಳೆಯನೊಂದಿಗೆ ಜ್ಞಾನಭಾರತಿ ಗಾಂಧಿ ಅಧ್ಯಯನ ಕೇಂದ್ರದ ಸಮೀಪ ಪೊದೆಯಂತಿರುವ ಪ್ರದೇಶದಲ್ಲಿ ಕಾರು ನಿಲ್ಲಿಸಿ ಮಾತನಾಡಿಕೊಂಡು ಕುಳಿತಿದ್ದಳು. ಈ ವೇಳೆ ಆಗಮಿಸಿದ್ದ 7 ದುಷ್ಕರ್ಮಿಗಳು ಕಾರಿಗೆ ಕಬ್ಬಿಣದ ರಾಡು ಹಾಗೂ ದೊಣ್ಣೆಯಿಂದ ಹೊಡೆದು ಇಬ್ಬರನ್ನು ಕೆಳಗಿಳಿಯಲು ಹೇಳಿದ್ದಾರೆ. ಕೆಳಗಿಳಿದ ಇಬ್ಬರನ್ನು ದಟ್ಟವಾದ ಕಾಡಿನ ಒಳಕ್ಕೆ ಕರೆದುಕೊಂಡು ಹೋಗಿ ಹಣ, ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ನೀಡುವಂತೆ ಕೇಳಿ ಹಲ್ಲೆ ನಡೆಸಿದ್ದಾರೆ.

ಯುವಕ ತಾನು ಕಾರಿನಲ್ಲಿ ಪರ್ಸ್ ಇಟ್ಟಿದ್ದು ಅದನ್ನು ತರುವುದಾಗಿ ಹೇಳಿ ಹೋದಾಗ ದುಷ್ಕರ್ಮಿಗಳು ಯುವತಿಯನ್ನು ದಟ್ಟವಾದ ಪೊದೆಯೊಳಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಘಟನೆಯ ಬಳಿಕ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ಯುವತಿ ನೇಪಾಳಕ್ಕೆ ವಾಪಸಾಗಿದ್ದಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement