ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೇಲೇಕೇರಿ ಅದಿರು ನಾಪತ್ತೆ: 4 ಶಾಸಕರ ಬಂಧನಕ್ಕೆ ಸಿಬಿಐ ಸಿದ್ಧತೆ

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಬುಧವಾರವಷ್ಟೇ ಮಾಜಿ ಸಚಿವ ಗಾಲಿ ಜರ್ನಾದನ ರೆಡ್ಡಿಯ ಆಪ್ತ ಕೋವುರ..

Lingaraj Badiger
Updated On : 6 Sept 2013, 2:20 am

ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಬುಧವಾರವಷ್ಟೇ ಮಾಜಿ ಸಚಿವ ಗಾಲಿ ಜರ್ನಾದನ ರೆಡ್ಡಿಯ ಆಪ್ತ ಕೋವುರ ಸೋಮಶೇಖರ್‌ನನ್ನು ಬಂಧಿಸಿದ್ದ ಸಿಬಿಐ ಇದೀಗ ಪ್ರಕರಣ ಸಂಬಂಧ ರಾಜ್ಯದ ನಾಲ್ವರು ಶಾಸಕರನ್ನು ಬಂಧಿಸಲು ಸಿದ್ಧತೆ ನಡೆಸಿದೆ.

ಶಾಸಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲು ಮುಂದಾಗಿರುವ ಸಿಬಿಐ, ಈ ಸಂಬಂಧ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಅನುಮತಿ ಕೇಳಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿರುವ ಸ್ಪೀಕರ್, ಶಾಸಕರು ಸರ್ಕಾರಿ ಬಂಗೆಯಲ್ಲಿ ವಾಸವಾಗಿದ್ದರೆ ಮತ್ತು ಅಧಿವೇಶನದ ನಡೆಯುತ್ತಿದ್ದರೆ ಮಾತ್ರ ನನ್ನ ಅನುಮತಿ ಪಡೆಯಬೇಕಾಗುತ್ತದೆ. ಇಲ್ಲದಿದ್ದೆರೆ ನನ್ನ ಅನುಮತಿಯ ಅಗತ್ಯ ಇಲ್ಲ ಎಂದು ಹೇಳುವ ಮೂಲಕ ಶಾಸಕರ ಬಂಧನಕ್ಕೆ ಹಸಿರು ನಿಶಾನೆ ತೊರಿದ್ದಾರೆ.

ವಿದೇಶಗಳಿಗೆ ಅಕ್ರಮವಾಗಿ ಅದಿರು ರಫ್ತು ಮಾಡಿರುವ ಆರೋಪ ಎದುರಿಸುತ್ತಿರುವ ಶಾಸಕರಾದ ನಾಗೇಂದ್ರ, ಸುರೇಶ್ ಬಾಬು, ಆನಂದ್‌ಸಿಂಗ್ ಹಾಗೂ ಸತೀಶ್ ಸೈಲ್ ಈಗ ಬಂಧನದ ಭೀತಿ ಎದುರಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement