ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೈಕೋ ಜೈಶಂಕರ 10 ದಿನ ಪೊಲೀಸ್ ವಶಕ್ಕೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿ ನಿನ್ನೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಸೈಕೋ ಕಿಲ್ಲರ್ ..

Lingaraj Badiger
Updated On : 7 Sept 2013, 12:41 pm

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿ ನಿನ್ನೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಸೈಕೋ ಕಿಲ್ಲರ್ ಜೈಶಂಕರನನ್ನು 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಶನಿವಾರ ಕೋರ್ಟ್ ಆದೇಶಿಸಿದೆ.

ಪರಪ್ಪನ ಅಗ್ರಹಾರ ಪಕ್ಕದಲ್ಲೇ ಸೇರಿಯಾಗಿದ್ದ ಶಂಕರನನ್ನು ಇಂದು ಪೊಲೀಸರು ನಗರದ 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಸೈಕೋ ಶಂಕರನನ್ನು 10 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಈ ಮಧ್ಯೆ, 30 ಅಡಿ ಎತ್ತರದ ಜೈಲಿನ ಗೋಡೆ ಹಾರಿದ್ದರಿಂದ ಶಂಕರನ ಎರಡು ಪಾದಗಳಿಗೆ ಹಾಗೂ ಕೈಗಳಿಗೆ ಗಾಯಗಳಾಗಿವೆ. ಮೊಣಕಾಲುಗಳಲ್ಲಿ ಊತ ಬಂದಿದೆ. ಅಲ್ಲದೆ ಬೆನ್ನು ಮೂಳೆ ಮುರಿದಿದ್ದು, ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರದ ಕೂಡ್ಲು ಗೇಟ್ ಸಮೀಪ ಜೈಶಂಕರ್ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು, ಚಾಣಾಕ್ಷತನದಿಂದ ಬಲೆ ಬೀಸಿ, ಮತ್ತೊಂದು ಪ್ರದೇಶಕ್ಕೆ ಪಾರಾರಿಯಾಗಲು ನೆರವು ನೀಡುವ ನಾಟಕವಾಡಿ ಪೊಲೀಸರು ಶಂಕರನನ್ನು ಬಂಧಿಸಿದ್ದರು. ಇದರಿಂದ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದ ಸೈಕೋ ಶಂಕರ ಪರಾರಿ ಪ್ರಕರಣಕ್ಕೆ ತೆರೆ ಬಿದ್ದಿತ್ತು. ಅಲ್ಲದೆ ಪೊಲೀಸರು ಗೌರಿ-ಗಣೇಶನ ಹಬ್ಬವನ್ನು ನೆಮ್ಮದಿಯಿಂದ ಆಚರಿಸುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement