ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉ.ಪ್ರ.ಹಿಂಸಾಚಾರ: ಸಾವಿನ ಸಂಖ್ಯೆ 12ಕ್ಕೇರಿಕೆ, ವರದಿ ಕೇಳಿದ ಕೇಂದ್ರ

ಮುಜಾಫರ್ನಗರದ ಕಾವಲ್ ಪ್ರದೇಶದಲ್ಲಿ ನಿನ್ನೆ ನಡೆದ ಕೋಮುಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿದ್ದು, ..

Lingaraj Badiger
Updated On : 8 Sept 2013, 2:35 am

ಮುಜಾಫರ್ನಗರ: ಮುಜಾಫರ್ನಗರದ ಕಾವಲ್ ಪ್ರದೇಶದಲ್ಲಿ ನಿನ್ನೆ ನಡೆದ ಕೋಮುಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿದ್ದು, ಘಟನೆ ಕುರಿತು ವರದಿ ನೀಡುವಂತೆ ಕೇಂದ್ರ ಸರ್ಕಾರ ಉತ್ತರ ಪ್ರದೇಶ ಸರ್ಕಾರಕ್ಕೆ ಭಾನುವಾರ ಸೂಚಿಸಿದೆ.

ಶನಿವಾರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ಈ ವೇಳೆ ವರದಿಗಾಗಿ ತೆರಳಿದ್ದ ಪತ್ರಕರ್ತ ಹಾಗೂ ಫೋಟೋಗ್ರಾಫರ್ ಸೇರಿದಂತೆ ಆರು ಮಂದಿಯನ್ನು ಹತ್ಯೆ ಮಾಡಿದ್ದರು. ಅಲ್ಲದೆ ಹಿಂಸಾಚಾರದಲ್ಲಿ 34ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

ಆಗಸ್ಟ್ 27ರಂದು ಕಾವಲ್ ಗ್ರಾಮದಲ್ಲಿ ನಡೆದ ಮೂವರ ಹತ್ಯೆಯ ನಂತರ ಈ ಪ್ರದೇಶದಲ್ಲಿ ಕೋಮುಗಲಭೆಗಳಾಗುತ್ತಿವೆ. ಆಗಿನಿಂದಲೂ ನಡೆಯುತ್ತಿರುವ ಘರ್ಷಣೆಗಳ ಸಂಬಂಧ ವರದಿ ಮಾಡಲು ವರದಿಗಾರರು ತೆರಳಿದ್ದರು ಎನ್ನಲಾಗಿದೆ.

ಘಟನೆಯಿಂದ ಇಂದು ಸಹ ಮುಜಾಫರ್ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕರ್ಫ್ಯೂ ವಿಧಿಸಲಾಗಿದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಮತ್ತು ಈ ಸಂಬಂಧ ಈವರೆಗೆ 30 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement