ಬೆಳಗಾವಿಯಲ್ಲಿ ಗುಂಪು ಘರ್ಷಣೆ: 8 ಮಂದಿಗೆ ಗಾಯ
ಬೆಳಗಾವಿಯ ಅನಗೋಳದಲ್ಲಿ ಗಣೇಶೋತ್ಸ ನಿಮಿತ್ತ ಬ್ಯಾನರ್ ಕಟ್ಟುವೆ ವೇಳೆ ಎರಡು ಕೋಮಿನ ನಡುವೆ ಘರ್ಷಣೆ ಸಂಭವಿಸಿದ್ದು,..
ಬೆಳಗಾವಿ: ಬೆಳಗಾವಿಯ ಅನಗೋಳದಲ್ಲಿ ಗಣೇಶೋತ್ಸ ನಿಮಿತ್ತ ಬ್ಯಾನರ್ ಕಟ್ಟುವೆ ವೇಳೆ ಎರಡು ಕೋಮಿನ ನಡುವೆ ಘರ್ಷಣೆ ಸಂಭವಿಸಿದ್ದು, ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾನರ್ ಕಟ್ಟಲು ಮತ್ತೊಂದು ಕೋಮಿನವರು ವಿರೋಧ ವ್ಯಕ್ತ ಪಡಿಸಿದ್ದರಿಂದ ಎರಡು ಗುಂಪಿನ ನಡುವೆ ಜಗಳ ಶುರುವಾಗಿದೆ. ಘರ್ಷಣೆಯಲ್ಲಿ ಭಾಗವಹಿಸಿದ್ದವರನ್ನು ವಶಕ್ಕೆ ತೆಗೆದುಕೊಂಡಿದ್ದು, ಘರ್ಷಣೆಯಲ್ಲಿ ಗಂಭೀರ ಗಾಯಗಳೇನೂ ಆಗಿಲ್ಲ ಎಂದು ಬೆಳಗಾವಿ ಎಸ್ಪಿ ಡಾ.ಚಂದ್ರಗುಪ್ತ ಅವರು ಹೇಳಿದ್ದಾರೆ.
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪೊಲೀಸರು 24 ಗಂಟೆಯೂ ಎಚ್ಚರದಿಂದಿರುತ್ತಾರೆ. ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಮತ್ತು ಗಣೇಶ ಹಬ್ಬಕ್ಕೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಚಂದ್ರಗುಪ್ತ ಅವರು ತಿಳಿಸಿದ್ದಾರೆ.