ಸಂತೋಷ್ ಲಾಡ್ರನ್ನು ಮಂತ್ರಿ ಮಾಡಿದ್ದೇಕೆ?: ಅನಿಲ್ ಲಾಡ್
ತಮ್ಮ ಸಹೋದರ ಸಂತೋಷ್ ಲಾಡ್ ಅವರನ್ನು ಮಂತ್ರಿ ಮಾಡಿದ್ದೇಕೆ ಎಂದು ಪ್ರಶ್ನಿಸಿರುವ ಅನಿಲ್ ..
ಬಳ್ಳಾರಿ: ತಮ್ಮ ಸಹೋದರ ಸಂತೋಷ್ ಲಾಡ್ ಅವರನ್ನು ಮಂತ್ರಿ ಮಾಡಿದ್ದೇಕೆ ಎಂದು ಪ್ರಶ್ನಿಸಿರುವ ಅನಿಲ್ ಲಾಡ್ ಅವರು, ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಇಬ್ಬರ ಹೆಸರೂ ಇದೆ. ಆದರೂ ಅವರಿಗೆ ಸಚಿವ ಸ್ಥಾನ ನೀಡಿ, ನನಗೆ ಮಾತ್ರ ಮಂತ್ರಿ ಸ್ಥಾನ ತಪ್ಪಿಸಲಾಗಿದೆ ಎಂದು ಶಾಸಕ ಅನಿಲ್ ಲಾಡ್ ಅವರು ಹೇಳಿದ್ದಾರೆ.
ಇಂದು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅನಿಲ್ ಲಾಡ್, ನಾನು ಕಳಂಕಿತನೆಂದು ನಮ್ಮ ಪಕ್ಷದವರೇ ಹೈಕಮಾಂಡ್ಗೆ ದೂರು ನೀಡಿದ್ದಾರೆ. ಆದರೆ ನಾನು ಕಳಂಕಿತ ಅಲ್ಲ. ನನಗೂ ಸಚಿವನಾಗುವ ಆಸೆ ಇದೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದವರೇ ನನಗೆ ಆಡಳಿತ ಮಾಡಲು ಬೀಡುತ್ತಿಲ್ಲ. ನನ್ನ ವಿರುದ್ಧ ಕೆಲವರು ಪುಸ್ತಕಗಳನ್ನು ಬರೆಸುತ್ತಿದ್ದಾರೆ. ಅಲ್ಲದೆ ನನ್ನ ಗಮನಕ್ಕೆ ಬಾರದಂತೆ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತಿದ್ದಾರೆ ಎಂದು ಅನಿಲ್ ಲಾಡ್ ಆರೋಪಿಸಿದ್ದಾರೆ.
ಇದೇ ವೇಳೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಅನಿಲ್ ಲಾಡ್, ನಾನು ನಿಜವಾಗಲೂ ಕಳಂಕಿತನೆಂದಾರರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.