ಉಗ್ರ 'ತುಂಡಾ' ಪೊಲೀಸ್ ಕಸ್ಟಡಿ 7 ದಿನ ವಿಸ್ತರಣೆ
ನವದೆಹಲಿ: ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಕರೀಂ ತುಂಡಾನ ಪೊಲೀಸ್ ಬಂಧನದ ಅವಧಿಯನ್ನು ಬುಧವಾರ ನ್ಯಾಯಾಲಯ ಮತ್ತೆ 7 ದಿನಗಳಿಗೆ ವಿಸ್ತರಿಸಿದೆ.
ಉಗ್ರ ತುಂಡಾನ ಬಂಧನ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಪೊಲೀಸರು ತುಂಡಾನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ವೇಳೆ ತುಂಡಾ ಹಲವು ಮಹತ್ವದ ವಿವರಗಳನ್ನು ಬಾಯಿಬಿಟ್ಟಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದ ಪೊಲೀಸರು, ಭಾರತದ ಗಡಿಯೊಳಗೆ ಒಳನುಸುಳುವಿಕೆಗೆ ಸಹಾಯ ಮಾಡಿದ ಪಾಕಿಸ್ತಾನಿ ದೇಶಿಯರ ಬಗ್ಗೆ ತುಂಡಾ ಮಾಹಿತಿ ನೀಡಿದ್ದು ಅವರ ಗುರುತು ಹಚ್ಟಬೇಕಿದೆ. ಹೀಗಾಗಿ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದರು.
ದೆಹಲಿ ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು ತುಂಡಾನ ಬಂಧನ ಅವಧಿಯನ್ನು 7 ದಿನಗಳಿಗೆ ವಿಸ್ತರಿಸಿದ್ದಾರೆ. ಅಲ್ಲದೆ ಸೆಪ್ಟೆಂಬರ್ 18ರಂದು ಕೋರ್ಟ್ಗೆ ಹಾಜರು ಪಡಿಸುವಂತೆ ಸೂಚಿಸಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಲಗೈ ಭಂಟ ಮತ್ತು ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಕರೀಂ ತುಂಡಾ ಪೊಲೀಸ್ ಕಸ್ಟಡಿಯನ್ನು ದೆಹಲಿ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 17ರವರೆಗೆ ವಿಸ್ತರಿಸಿದೆ. ತುಂಡಾನ ವಿಚಾರಣೆಗಾಗಿ ಈ ಹಿಂದೆ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿತ್ತು.
ಭೂಗತ ಪಾತಕಿರ ದಾವೂದ್ ಇಬ್ರಾಹಿಂನ ಬಲಗೈ ಬಂಟನಾಗಿದ್ದ ತುಂಡಾ, ಎಲ್ಇಟಿ ಸಂಘಟನೆಯಲ್ಲಿ ಬಾಂಬ್ಗಳನ್ನು ಸಿದ್ಧಪಡಿಸುವುದರಲ್ಲಿ ಪರಿಣಿತನಾಗಿದ್ದ. ಸಮಾರು 40ಕ್ಕೂ ಹೆಚ್ಟು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ತುಂಡಾ, 2011ರ ಸಂಸತ್ ಮೇಲಿನ ದಾಳಿ, 1996-98ರಲ್ಲಿ ಇಂಡೋ ನೇಪಾಳ ಗಡಿಯಲ್ಲಿ ನಡೆದ ಸರಣಿ ಸ್ಫೋಟ, 26/11 ಮುಂಬೈ ದಾಳಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು.