ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಿಷೇದಿತ ಅಯೋಧ್ಯ ಯಾತ್ರೆ: 75 ಮಂದಿ ಬಂಧನ

Vishwanath S
Updated On : 13 Sept 2013, 6:15 am

ಲಖ್ನೌವ್: ಉತ್ತರ ಪ್ರದೇಶದ ರಾಮಜನ್ಮಭೂಮಿ ಅಯೋಧ್ಯಯಲ್ಲಿ ವಿಶ್ವ ಹಿಂದೂಪರಿಷತ್(ವಿಎಚ್‌ಪಿ) ನಾಯಕರು ನಡೆಸುತ್ತಿದ್ದ ಚೌರಾಸಿ ಕೋಸಿ ಪರಿಕ್ರಮದ ಶಾಂತಿಯುತ ಯಾತ್ರೆಯಲ್ಲಿ ಭಾಗವಹಿಸಿದ್ದ 75 ಮಂದಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಹಿಂದೂಗಳ ಪ್ರವಿತ್ರ ಕ್ಷೇತ್ರ ರಾಮ ಜನ್ಮಭೂಮಿ ಅಯೋಧ್ಯ ಯಾತ್ರೆಯನ್ನು ರಾಜ್ಯ ಸರ್ಕಾರ ನಿಷೇದಿಸಿತ್ತು. ಆದರೆ 20 ದಿನಗಳ ಹಿಂದೆ ವಿಎಚ್‌ಪಿ ನಾಯಕರು ಕೈಗೊಂಡಿದ್ದ 84 ಕೋಸಿ ಪರಿಕ್ರಮದ ಯಾತ್ರೆ ಯಾತ್ರಾರ್ಥಿಗಳು ಕಳೆದ ರಾತ್ರಿ ಗೊಂಡಾ ಹಾಗೂ ಬಸ್ತಿ ಗಡಿ ಪ್ರದೇಶವನ್ನು ತಲುಪುತ್ತಿದ್ದಂತೆ ಅವರನ್ನು ಕೇಂದ್ರ ಪೊಲೀಸ್ ಮೀಸಲು ಪಡೆ ಸಿಬ್ಬಂದಿಗಳು 75 ಯಾತ್ರಾರ್ಥಿಗಳು ಬಂಧಿಸಿದ್ದಾರೆ. ಇಂದು ಸ್ಥಳಕ್ಕೆ ಧಾವಿಸಿದ ವಿಭಾಗೀಯ ಆಯುಕ್ತ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಪರಿಶೀಲನೆ ನಡೆಸಿದರು.

ಪೊಲೀಸರ ಈ ಕ್ರಮವನ್ನು ಖಂಡಿಸಿರುವ ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಸಂಪತ್ ರಾಯ್ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಎಲ್ಲರಿಗೂ ಹಕ್ಕಿದೆ. ಹೀಗಾಗಿ ಪೊಲೀಸರ ಕ್ರಮ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement