ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗಲಭೆ ಪೀಡಿತ ಪ್ರದೇಶಕ್ಕೆ ಅಖಿಲೇಶ್ ಭೇಟಿ

ಮುಜಾಫರ್‌ನಗರ ಜಿಲ್ಲೆಯ ಗಲಭೆ ಪೀಡಿತ ಪ್ರದೇಶಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶುಕ್ರವಾರ ಭೇಟಿ ನೀಡಿ...

Vishwanath S
Updated On : 15 Sept 2013, 4:22 am

ಮುಜಾಫರ್‌ನಗರ: ಮುಜಾಫರ್‌ನಗರ ಜಿಲ್ಲೆಯ ಗಲಭೆ ಪೀಡಿತ ಪ್ರದೇಶಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಆಗಸ್ಟ್ 27ರಂದು ಮಲ್ಲಿಕ್‌ಪುರ್‌ನ ಯುವತಿಯೊಬ್ಬಳನ್ನು ಯುವಕರ ಗುಂಪೊಂದು ರೇಗಿಸಿದ ಪರಿಣಾಮ ಮುಜಾಫರ್‌ನಗರದ ಕಾವಲಿ ಎಂಬಲ್ಲಿ ಎರಡು ಸಮುದಾಯಗಳ ನಡುವೆ ಕೋಮುಗಲಭೆ ಉಂಟಾಗಿತ್ತು. ಯುವತಿಯನ್ನು ಚುಡಾಯಿಸಿದ ಕಾರಣ ಯುವತಿಯ ಸಂಬಂಧಿಕರಿಂದ ಹಲ್ಲೆಗೀಡಾಗಿ ಮೃತಪಟ್ಟಿದ್ದ ಯುವಕನ ತಂದೆಯನ್ನು ಭೇಟಿ ಮಾಡಿ ಸಿಎಂ ಸಾಂತ್ವಾನ ಹೇಳಿದರು.

ಗಲಭೆಯನ್ನು ಸಹಬಂಧಿಗೆ ತರಲಾಗದ ಸರ್ಕಾರದ ಕ್ರಮವನ್ನು ನಗರಾಭಿವೃದ್ದಿ ಸಚಿವ ಅಜಾಂ ಖಾನ್ ಅವರು ತೀವ್ರವಾಗಿ ಖಂಡಿಸಿದ್ದರು. ಇದೇ ವೇಳೆ ಆಗ್ರದಲ್ಲಿ ನಡೆದ ಸಮಾಜವಾದಿ ಪಕ್ಷದ ಸಭೆಗೂ ಗೈರಾಗಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಇದಾದ ಎರಡು ದಿನಗಳ ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಸಿಎಂ ಗಲಭೆಯಿಂದಾಗಿ ಮನೆ ಮಠ ಕಳೆದುಕೊಂಡ ನಿರಾಶ್ರಿತರ ಸಮಸ್ಯೆಗಳನ್ನು ಆಲಿಸಿದರು.

ಕೋಮುಗಲಭೆಯನ್ನು ಹತ್ತಿಕ್ಕಲು ಸರ್ಕಾರಕ್ಕೆ ಸಾಧ್ಯವಾಗದೆ ಇದ್ದ ಕಾರಣ ಸರ್ಕಾರ ತೀವ್ರ ಮುಜುಗರಕ್ಕಿಡಾಗಿತ್ತು. ಅಲ್ಲದೆ ಗಲಭೆ ಶುರುವಾದ ಒಂದು ವಾರದ ನಂತರ ಪೊಲೀಸರ ಬೀಗಿ ಭದ್ರತೆಯೊಂದಿಗೆ ಕಾವಲಿಗೆ ಆಗಮಿಸಿದ ಅಖಿಲೇಶ್ ಯಾದವ್ ಪರಿಶೀಲನೆ ನಡೆಸಿದ್ದಾರೆ.

ಕೋಮುಗಲಭೆಯಿಂದಾಗಿ ಸುಮಾರು 45 ಮಂದಿ ಬಲಿಯಾಗಿದ್ದರು. ಅಲ್ಲದೆ ಗಲಭೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದು, 43 ಸಾವಿರ ಮಂದಿ ನಿರಾಶ್ರಿತರಾದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಸುಭಾಷ್ ದುಬೇ ಅವರನ್ನು ಅಮಾನತು ಮಾಡಲಾಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement