ಮಾಜಿ ಶಾಸಕ ಓಲೇಕಾರ್ಗೆ ಬಂಧನದ ಭೀತಿ
ಹಾವೇರಿ: ಲೋಕೋಪಯೋಗಿ ಇಲಾಖೆಗೆ ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದ ಆರೋಪದ ಮೇಲೆ ಹಾವೇರಿ ಮಾಜಿ ಶಾಸಕ ನೆಹರು ಓಲೇಕಾರ್ ಬಂಧನಕ್ಕೆ ಲೋಕಾಯುಕ್ತ ಕೋರ್ಟ್ ಸೋಮವಾರ ವಾರೆಂಟ್ ಜಾರಿಮಾಡಿದೆ.
ಲೋಕೋಪಯೋಗಿ ಇಲಾಖೆಗೆ ಓಲೇಕಾರ್ ಹಾಗೂ ಪುತ್ರರು ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಹಾವೇರಿ ಲೋಕಾಯುಕ್ತ ಕೋರ್ಟ್ಗೆ ಶಶಿಧರ್ ಹಳ್ಳಿಕೇರಿ ಎಂಬುವರು ದೂರು ನೀಡಿದ್ದರು.
ಇಂದು ಪ್ರಕರಣದ ವಿಚಾರಣೆ ನಡೆಸಿದ ಲೋಕಾಯುಕ್ತ ಕೋರ್ಟ್ ನೆಹರು ಓಲೆಕಾರ್, ಅವರ ಇಬ್ಬರು ಪುತ್ರರಾದ ಮಂಜುನಾಥ್ ಮತ್ತು ದೇವರಾಜ್ ವಿರುದ್ಧ ಬಂಧನದ ವಾರೆಂಟ್ ಜಾರಿಮಾಡಿದೆ. ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಅಧಿಕಾರಿಗಳ ವಿರುದ್ಧ ಸಮನ್ಸ್ ಜಾರಿ ಮಾಡಿದೆ.