'ಮಿಸ್ ಅಮೆರಿಕಾ' ಸ್ಪರ್ಧೆಯಲ್ಲಿ ಗೆದ್ದ ಭಾರತದ ನೀನಾ
ಹೂಸ್ಟನ್: 'ಮಿಸ್ ಅಮೆರಿಕಾ' ಸೌಂದರ್ಯ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಯುವತಿ ನೀನಾ ದವುಲೂರಿ ಅವರು ಸೋಮವಾರ ವಿಜೇತರಾಗಿದ್ದಾರೆ.
24 ವರ್ಷದ ನೀನಾ ದವುಲೂರಿ ಅವರು ಮಿಸ್ ಅಮೆರಿಕಾ ಕಿರೀಟ ಧರಿಸುವ ಮೂಲಕ ಈ ಸ್ಪರ್ಧೆಯಲ್ಲಿ ಗೆಲವು ಸಾಧಿಸಿದ ಮೊದಲ ಭಾರತೀಯ ಮೂಲದ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನೀನಾ ದವುಲೂರಿಯ ತಂದೆ ವೈದ್ಯರಾಗಿದ್ದು, ಅವರಂತೆ ವೈದ್ಯಳಾಗಲು ಬಯಸಿದ್ದ ನೀನಾ ಅವರು ಕನಿಷ್ಠ 50,000 ಡಾಲರ್ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ. ಮಿಸ್ ಅಮೆರಿಕಾ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಗಳನ್ನು ಅವರ ಜೀವನಶೈಲಿ, ದೇಹ ಸೌಂದರ್ಯ, ಪ್ರತಿಭೆ ಹಾಗೂ ವೈಯಕ್ತಿಕ ಸಂದರ್ಶನ ಮತ್ತು ವೇದಿಕೆಯಲ್ಲೊಂದು ಪ್ರಶ್ನೆ ಕೇಳುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ನ್ಯೂಜೆರ್ಸಿಯ ಅಟ್ಲಾಂಟಿಕ್ ನಗರದ ಎಬಿಸಿ ಟೆಲಿವಿಷನ್ ಪ್ರಸಾರ ಮಾಡಿರುವ ಈ ಸೌಂದರ್ಯ ಸ್ಪರ್ಧೆಯ ಫೈನಲ್ನಲ್ಲಿ ನೀನಾ ವಿಜೇತರಾಗಿದ್ದು, ಇವರು ಸ್ಪರ್ಧಿಸಿರುವ ಆ ಸೌಂದರ್ಯ ಸ್ಪರ್ಧೆಯ ಫೈನಲ್ ಕಾರ್ಯಕ್ರಮವನ್ನು ಹಲವಾರು ಮಂದಿ ಬೆಂಬಲಿಗರು ವೀಕ್ಷಿಸಿ ಆನಂದಿಸಿದ್ದಾರೆ.