ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಮಾತ್ ಮುಖಂಡ ಅಬ್ದುಲ್ ಖಾದಿರ್‌ಗೆ ಗಲ್ಲು

Vishwanath S
Updated On : 17 Sept 2013, 4:36 am

ಢಾಕಾ: 1971ರ ಯುದ್ಧ ಅಪರಾಧಗಳ ಆರೋಪ ಎದುರಿಸುತ್ತಿರುವ ಮೂಲಭೂತವಾದಿ ಜಮಾತ್ ಇಸ್ಲಾಮಿ ಮುಖಂಡ ಅಬ್ದುಲ್ ಖಾದಿರ್ ಮುಲ್ಲಾಗೆ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ಮಂಗಳವಾರ ಮರಣ ದಂಡನೆ ಶಿಕ್ಷೆ ವಿಧಿಸಿದೆ.

1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ವಿಮೋಚನಾ ಯುದ್ಧ ಸಂದರ್ಭದಲ್ಲಿ ಮಾನವೀಯತೆಯ ವಿರುದ್ಧ ಅಪರಾಧಗಳಿಗಾಗಿ ಈ ಮರಣ ದಂಡನೆ ವಿಧಿಸಲಾಗುತ್ತಿದೆ ಎಂದು ನ್ಯಾಯಾಧೀಶರಾದ ಮುಜಮ್ಮಿಳ್ ಹುಸೇನೆ ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ.

ಜಮಾತ್‌ನ ಹಿರಿಯ ಮುಖಂಡರಾಗಿರುವ 65 ವರ್ಷದ ಅಬ್ದುಲ್ ಖಾದಿರ್ ಅವರು ತಮ್ಮ ಮೇಲಿನ ಆರೋಪಗಳಿಂದ ಖುಲಾಸೆಗೊಳಿಸಬೇಕೆಂದು ಕೋರಿ ಕೋರ್ಟಿಗೆ ಮನವಿ  ಮಾಡಿದ್ದರು. ಆದರೆ ಅಬ್ದುಲ್ ಖಾದಿರ್ ಅವರ ಮನವಿಯನ್ನು ತಿರಸ್ಕರಿಸಿರುವ ಕೋರ್ಟ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ಯುದ್ಧ ಅಪರಾಧಗಳಂತ ಆರೋಪಗಳನ್ನು ಎದುರಿಸುತ್ತಿದ್ದ ಮುಲ್ಲಾಗೆ ಕಳೆದ ಎಂಟು ತಿಂಗಳ ಹಿಂದೆ ವಿಶೇಷ ನ್ಯಾಯ ಮಂಡಳಿಯೊಂದು ಜೀವಾವಧಿ ಸೆರೆವಾಸ ಶಿಕ್ಷೆ ವಿಧಿಸಿತ್ತು.
ದೇಶದ ಪರಮೋಚ್ಚ ನ್ಯಾಯಾಲಯವು ವಿಚಾರಣಾ ನ್ಯಾಯಾಲಯ ವಿಧಿಸಿದ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದ ಉದಾಹರಣೆಗಳೇ ಇಲ್ಲ ಎಂಬ ಕಾರಣಕ್ಕೆ ಈ ತೀರ್ಪಿನ್ನು ಮರುಪರಿಶೀಲನೆ ನಡೆಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ ಮುಲ್ಲಾ ಪರ ವಕೀಲರು ಹೇಳಿದ್ದಾರೆ.

ಢಾಕಾದ ಮೀರ್‌ಪುರನ ಮನೆಯೊಂದಕ್ಕೆ ದಾಳಿ ನಡೆಸಿದ್ದ ಆತನ ತಂಡವು ಎರಡು ವರ್ಷದ ಮಗು ಸೇರಿದಂತೆ ಮನೆಯೊಳಗಿದ್ದವರೆಲ್ಲರನ್ನೂ ಗುಂಡು ಹಾರಿಸಿ ಕೊಂದಿತ್ತು. ಅಲ್ಲದೆ ಇನ್ನು ಹಲವಾರು ಕುಟುಂಬಗಳನ್ನು ಕೊಲೆ ಮಾಡಿದ ಪ್ರಕರಣಗಳನ್ನು ಎದುರಿಸುತ್ತಿದ್ದ ಮುಲ್ಲಾನನ್ನು 2010ರ ಜುಲೈ 13ರಂದು ಪೊಲೀಸರು ಬಂಧಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement