ರಾಜಸ್ಥಾನ ಸಚಿವನ ವಿರುದ್ಧ ರೇಪ್ ಕೇಸ್
ರಾಜಸ್ಥಾನ ಸಚಿವ ಬಾಬುಲಾಲ್ನಗರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ...
ಜೈಪುರ್: ರಾಜಸ್ಥಾನ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಬಾಬುಲಾಲ್ನಗರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಮಂಗಳವಾರ ಪೊಲೀಸರಿಗೆ ಆದೇಶಿಸಿದೆ.
ತನ್ನ ನಿವಾಸದಲ್ಲೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಸಚಿವ ಬಾಬುಲಾಲ್ನಗರ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಜೈಪುರ್ ಕೋರ್ಟ್ ಆದೇಶಿಸಿದೆ. ಕೋರ್ಟ್ ಆದೇಶದ ಮೇರೆಗೆ ಸಚಿವರ ವಿರುದ್ಧ ಪೊಲೀಸರು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.
ಸೆಪ್ಟಂಬರ್ 13ರಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದ ಮಹಿಳೆ. ಕೆಲಸ ಕೊಡಿಸುವುದಾಗಿ ಹೇಳಿ ಸಚಿವ ಬಾಬುಲಾಲ್ನಗರ್ ಅವರು ಸೆ, 11ರಂದು ಮಧ್ಯಾಹ್ನ ಮನೆಗೆ ಬರುವಂತೆ ಹೇಳಿದರು. ಅದರಂತೆ ನಾನು ಅಲ್ಲಿಗೆ ಹೋದಾಗ ಸಚಿವರು ನನಗೆ ಕುಡಿಯುಂತೆ ಬಲವಂತ ಮಾಡಿದರು. ಅಲ್ಲದೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವಿಚಾರವಾಗಿ ಹೊರಗಡೆ ಯಾರಿಗು ತಿಳಿಸದಂತೆ ಬೆದರಿಕೆ ಹಾಕಿದ್ದರು ಎಂದು ದೂರಿದ್ದಾರೆ.