ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅನಂತಮೂರ್ತಿ ಕರ್ನಾಟಕದ ಪೂನಂ ಪಾಂಡೆ: ಆಯನೂರು

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು...

Vishwanath S
Updated On : 18 Sept 2013, 4:18 am

ಶಿವಮೊಗ್ಗ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದ ಸಾಹಿತಿ ಯು,ಆರ್ ಅನಂತಮೂರ್ತಿ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಆಯನೂರ್ ಮಂಜುನಾಥ್, ಅನಂತಮೂರ್ತಿ ಕರ್ನಾಟಕದ ಪೂನಂ ಪಾಂಡೆ ಎಂದು ಲೇವಡಿ ಮಾಡಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಹಿತಿ ಅನಂತಮೂರ್ತಿಗೆ ಪ್ರಚಾರದ ಗೀಳು ಹುಟ್ಟಿಕೊಂಡಿದೆ. ಅನಂತಮೂರ್ತಿ ಅವರು ಕರ್ನಾಟಕದ ಪೂನಂ ಪಾಂಡೆ ಇದ್ದ ಆಗೆ ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಬಾಲಿವುಡ್ ಸೆಕ್ಸಿ ನಟಿ ಪೂನಂ ಪಾಂಡೆ ಅವರು ಪ್ರಚಾರ ಗಿಟ್ಟಿಸಿಕೊಳ್ಳವ ಸಲುವಾಗಿ ಭಾರತ ಕ್ರಿಕೆಟ್ ತಂಡ 2011ರ ವಿಶ್ವಕಪ್ ಗೆದ್ದರೇ ನಾನು ಸಾರ್ವಜನಿಕವಾಗಿ ಬೆತ್ತಲೆಯಾಗುವೆ ಎಂದು ಹೇಳುವ ಮೂಲಕ ಕೀಳು ಪ್ರಚಾರ ಗಿಟ್ಟಿಸಿಕೊಂಡಿದ್ದರು. ಅದರಂತೆ ಮೋದಿ ಪ್ರಧಾನಿಯಾದರೆ ಭಾರತದಲ್ಲಿ ಬದುಕಿರುವುದಿಲ್ಲ ಎಂದು ಹೇಳಿವ ಮೂಲಕ ಅನಂತಮೂರ್ತಿ ಸಹ ಅಂತಹ ಪ್ರಚಾರ ಗಿಟ್ಟಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಆಯನೂರು ಆರೋಪಿಸಿದ್ದಾರೆ.

ಆಯನೂರು ಅವರ ಹೇಳಿಕೆ ಇದೀಗ ವಿವಾದಕ್ಕೀಡಾಗಿದ್ದು, ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು,ಆರ್ ಅನಂತಮೂರ್ತಿ ಅವರು, ಮೋದಿ ವಿರುದ್ಧದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಆಯನೂರು ಯಾರು ಎಂಬುದು ನನಗೆ ತಿಳಿದಿಲ್ಲ. ಹೀಗಾಗಿ ಅವರ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ಯಾರು ಏನೇ ಹೇಳಿಕೊಳ್ಳಲಿ ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

ಆದರೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ವಿಚಾರವಾಗಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಸಂಬಂಧ ಮಾತನಾಡಿರುವ ಹಿರಿಯ ಸಾಹಿತಿ ಡಾ.ಕೆ ಮರುಳಸಿದ್ದಪ್ಪ ಅವರು, ರಾಜ್ಯದ ಒಬ್ಬ ಉನ್ನತ ಸಾಹಿತಿ ಅನಂತಮೂರ್ತಿ ವಿರುದ್ಧ ಈ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಸಹಿಸುವುದಿಲ್ಲ. ಅನಂತಮೂರ್ತಿ ಸುಮಾರು 50 ವರ್ಷಗಳಿಂದ ಕೋಮುವಾದದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅವರ ಹೋರಾಟ ಅಪ್ರತಿಮವಾದದ್ದು, ಅವರ ಬಗ್ಗೆ ಇಷ್ಟೊಂದು ಹಗುರವಾಗಿ ಆಯನೂರು ಅವರು ಮಾತನಾಡಬಾರದಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement