ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೋಮುಗಲಭೆ ವಿರುದ್ಧ ಪ್ರತಿಯೊಬ್ಬರು ಹೋರಾಡಬೇಕು: ಪ್ರಧಾನಿ

ಕೋಮುಗಲಭೆಯಂತಹ ಪ್ರಕರಣಗಳ ವಿರುದ್ಧ ಹೋರಾಡಬೇಕಿರುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ...

Vishwanath S
Updated On : 20 Sept 2013, 3:21 am

ನವದೆಹಲಿ: ಕೋಮುಗಲಭೆಯಂತಹ ಪ್ರಕರಣಗಳ ವಿರುದ್ಧ ಹೋರಾಡಬೇಕಿರುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಶುಕ್ರವಾರ ಹೇಳಿದ್ದಾರೆ.

ನವದೆಹಲಿಯಲ್ಲಿಂದು 'ಕೋಮು ಸೌಹಾರ್ದತೆ' ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕೋಮುಗಲಭೆಯಂತಹ ದುಷ್ಕೃತ್ಯಗಳ ವಿರುದ್ಧ ದೇಶದ ಪ್ರತಿಯೊಬ್ಬ ಪ್ರಜೆಯು ಹೋರಾಡಬೇಕು ಎಂದು ಕರೆ ನೀಡಿದರು. ಮುಜಾಫರ್‌ನಗರಲ್ಲಿ ಉಂಟಾಗಿದ್ದ ಕೋಮುಗಲಭೆ ಶೋಚನಿಯವಾದದ್ದು, ಈ ಗಲಭೆಯಿಂದಾಗಿ 40 ಜನರ ಪ್ರಾಣ ಕಳೆದುಕೊಂಡರು. ಸಾವಿರಾರು ಜನರ ಮನೆ ಮಠ ಕಳೆದುಕೊಂಡಿದ್ದಾರೆ ಎಂದರು.

ಕೋಮುಗಲಭೆಯಂತಹ ಕೃತ್ಯಗಳ ಪ್ರಚೋದನೆಗೆ ಯುವ ಜನತೆ ಒಳಗಾಗಬಾರದು. ಇಂತಹ ಗಲಭೆಗಳ ವಿರುದ್ಧ ಹೋರಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು ಎಂದರು. ದೇಶದ ಕೆಲವೊಂದು ರಾಜ್ಯಗಳು ಮತೀಯಗಲಭೆಗೆ ತುತ್ತಾಗಿದ್ದು, ಈ ರಾಜ್ಯಗಳಲ್ಲಿ ಅಭಿವೃದ್ದಿ ಮಂದಗತಿಯಲ್ಲಿದೆ. ಹೀಗಾಗಿ ದೇಶದ ಸರ್ವತೋಮುಖ ಬೆಳವಣಿಗೆ ಸಾಧಿಸಲು ಸಾಧ್ಯವಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ, ಕೋಮುಗಲಭೆಗೆ ತುತ್ತಾಗಿದ್ದ ಕೆಲವೊಂದು ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಹೀಗಾಗಿ ಅಲ್ಲಿನ ಜನರಲ್ಲಿ ಉಂಟಾಗಿರುವ ಮತೀಯ ಅಂಧ ಭಾವನೆಯಿಂದ ಹೊರಗೆ ತರಬೇಕಿದೆ. ಅಲ್ಲದೆ ಅಂತಹ ಜನರ ಆಲೋಚನಾ ದೃಷ್ಠಿಯನ್ನು ಬದಲಾಯಿಸಬೇಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement