ಶಂಕಿತ ಉಗ್ರ ಉಸ್ಮಾನಿ ಪೊಲೀಸ್ ವಶದಿಂದ ಪರಾರಿ
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯ ಅಫ್ಜಲ್ ಉಸ್ಮಾನಿ ಪೊಲೀಸರ ಕಣ್ಣುತಪ್ಪಿಸಿ ಶುಕ್ರವಾರ...
ಮುಂಬೈ: ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯ ಅಫ್ಜಲ್ ಉಸ್ಮಾನಿ ಪೊಲೀಸರ ಕಣ್ಣುತಪ್ಪಿಸಿ ಶುಕ್ರವಾರ ಮುಂಬೈನ ಕೋರ್ಟ್ ಆವರಣದಿಂದ ಪರಾರಿಯಾಗಿದ್ದಾನೆ.
2008ರ ಅಹಮದಾಬಾದ್ ಸ್ಫೋಟ ಪ್ರರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಉಸ್ಮಾನಿಯನ್ನು ಮುಂಬೈ ಕೋರ್ಟ್‌ಗೆ ಹಾಜರುಪಡಿಸಲು ಕರೆತಂದಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಕಣ್‌ಗಾವಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಕಾರುಗಳ್ಳನಾದ ಉಸ್ಮಾನಿ ಹಲವು ಸ್ಫೋಟಕ್ಕೆ ಕಾರುಗಳನ್ನು ಒದಗಿಸುತ್ತಿದ್ದ. ಹೀಗಾಗಿ 2008ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಸ್ಫೋಟಕ್ಕೂ ಈತನೆ ಕಾರು ಒದಗಿಸಿದ್ದಾನೆ ಎಂಬ ಆರೋಪದ ಮೇಲೆ ಪೊಲೀಸರು ಶಂಕಿತ ಉಗ್ರ ಉಸ್ಮಾನಿಯನ್ನು 2008ರಲ್ಲಿ ಉತ್ತರ ಪ್ರದೇಶದಲ್ಲಿ ಬಂಧಿಸಿದ್ದರು.
ಕ್ರೈಂಬ್ರಾಚ್ ಪೊಲೀಸರ ವಶದಿಂದ ಉಸ್ಮಾನಿ ಈ ಹಿಂದೆಯೂ ಪರಾರಿಯಾಗಲು ವಿಫಲ ಪ್ರಯತ್ನ ಮಾಡಿದ್ದ ಆದರೆ ಅಂದು ಪೊಲೀಸರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ವಿಚಾರಣೆಗಾಗಿ ಕೋರ್ಟ್ ಮುಂದೆ ಹಾಜರು ಪಡಿಸುವ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಶಂಕಿತ ಉಗ್ರನಾಗಿರುವುದರಿಂದ ಇತನ ಬಂಧನಕ್ಕಾಗಿ ಪೊಲೀಸರು ಪತ್ತೆ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.