ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಧಿಕಾರ ದುರ್ಬಳಕೆ: ಆರೋಪ ತಳ್ಳಿ ಹಾಕಿದ ವಿ.ಕೆ ಸಿಂಗ್

ಬೇಹುಗಾರಿಕಾ ಘಟಕದ ಮೂಲಕ ಹಿರಿಯ ಸೇನಾಧಿಕಾರಿಗಳ ಫೋನ್ ಕದ್ದಾಲಿಕೆ ಹಾಗೂ ಸೇನೆಯ ರಹಸ್ಯ ನಿಧಿ ಮತ್ತು ಅಧಿಕಾರವನ್ನು...

Mainashree
Updated On : 21 Sept 2013, 5:00 am

ನವದೆಹಲಿ: ಬೇಹುಗಾರಿಕಾ ಘಟಕದ ಮೂಲಕ ಹಿರಿಯ ಸೇನಾಧಿಕಾರಿಗಳ ಫೋನ್ ಕದ್ದಾಲಿಕೆ ಹಾಗೂ ಸೇನೆಯ ರಹಸ್ಯ ನಿಧಿ ಮತ್ತು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ನಿವೃತ್ತ ಭೂ ಸೇನಾ ಮುಖ್ಯಸ್ಥ ಜ. ವಿ.ಕೆ. ಸಿಂಗ್ ಅವರು ತಳ್ಳಿಹಾಕಿದ್ದಾರೆ.

ನಾವು ಕರ್ತವ್ಯದಲ್ಲಿದ್ದಾಗ ಯಾವುದೇ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸರ್ಕಾರದ ಪ್ರೇರಣೆಯಿಂದ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದ ಅವರು, ಅಲ್ಲಿನ ಸರ್ಕಾರಕ್ಕೆ ತಮ್ಮ ಕಾರ್ಯವೈಖರಿ ಬಗ್ಗೆ ತಿಳಿದಿದೆ. ಅಧಿಕಾರದಲ್ಲಿದ್ದಾಗ ಯಾವ ರೀತಿ ಭದ್ರತೆ ಕಲ್ಪಿಸಿದ್ದೇನೆ ಎಂಬುದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳಿಗೆ ತಿಳಿದೇ ಇದೆ. ಆದರೆ ನನ್ನ ಮೇಲೆ ಯಾವುದೋ ಹುನ್ನಾರ ನಡೆಸಲಾಗುತ್ತಿದೆ.

ಮೋದಿ ಜತೆ ವೇದಿಕೆ ಹಂಚಿಕೊಂಡಿರುವುದು ಕೆಲವರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಈ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ, ರಹಸ್ಯ ಬೇಹುಗಾರಿಕಾ ಘಟಕ ಸ್ಥಾಪಿಸುವ ಮೂಲಕ ಸೇನಾಧಿಕಾರಿಗಳ ವಿರುದ್ಧವೇ ಗೂಢಚರ್ಯೆ ನಡೆಸಲಾಗಿದೆ, ಕೃಷಿ ಸಚಿವ ಗುಲಾಂ ಹಸನ್ ಮಿರ್ ಅವರಿಗೆ 1 ಕೋಟಿ ಪಾವತಿ, ಹಿರಿಯ ಸೇನಾಧಿಕಾರಿಗಳ ದೂರವಾಣಿ ಅಕ್ರಮವಾಗಿ ಕದ್ದಾಲಿಕೆ ಮಾಡಿದ್ದಾರೆ ಎಂದು ವಿ.ಕೆ ಸಿಂಗ್ ಮೇಲೆ ಆರೋಪ ವರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement