ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಐಸಿಯುನಲ್ಲಿದ್ದ ರೋಗಿಯ ಮೇಲೆ ಅತ್ಯಾಚಾರವೆಸಗಿದ ವೈದ್ಯನಿಗೆ ಜೀವಾವಧಿ ಶಿಕ್ಷೆ

Mainashree
Updated On : 21 Sept 2013, 6:18 am

ಮುಂಬೈ: ಐಸಿಯುನಲ್ಲಿದ್ದ ರೋಗಿಯ ಮೇಲೆ ಅತ್ಯಾಚಾರವೆಸಗಿದ್ದ ನೀಚ ವೈದ್ಯನಿಗೆ ಮುಂಬೈ ಹೈಕೋರ್ಟ್ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ನ್ಯಾಯಾಮೂರ್ತಿಗಳಾದ ಪಿ.ವಿ ಹರ್ದಾಸ್ ಮತ್ತು ಪಿ.ಎನ್ ದೇಶಮುಖ್ ಅವರು ಈ ಆದೇಶ ಹೊರಡಿಸಿದ್ದಾರೆ.

ಥೇನ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೇಲೆ ಅದೇ ಆಸ್ಪತ್ರೆಯ 29 ವರ್ಷದ ವೈದ್ಯ ಡಾ. ವನ್ನೇ ಡ್ರೀವ್ ಅತ್ಯಚಾರವೆಸಗಿದ್ದಾನೆ.

ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಜನವರಿ 28, 2013ರಂದು ಲೋಟಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಜನರಲ್ ವಾರ್ಡ್‌ಗೆ ದಾಖಲು ಮಾಡಲಾಗಿತ್ತು. ಡಾ. ತದ್ವಿ ಎಂಬುವವರು ಇವರಿಗೆ ಚಿಕಿತ್ಸೆ ನೀಡುತ್ತಿದ್ದರು. ರಾತ್ರಿ ಪಾಳಿ ಮಾಡುತ್ತಿದ್ದ ಆರೋಪಿ ಡಾ.ವನ್ನೆ, ಮಹಿಳೆ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಐಸಿಯುಗೆ ದಾಖಲಿಸಿದ್ದಾರೆ. ನಂತರ ಅಲ್ಲಿದ್ದ ನರ್ಸ್‌ಗೆ ಮತ್ತು ಮಹಿಳಾ ರೋಗಿಯ ಪತಿಗೆ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಕಳುಹಿಸಿದ್ದಾನೆ.

ಅವರು ಹೋದ ಮೇಲೆ ರೋಗಿಗೆ ಮತ್ತುಬರುವ ಚುಚ್ಚುಮದ್ದು ನೀಡಿ ಅತ್ಯಾಚಾರವೆಸಗಿದ್ದಾನೆ. ನಂತರ ಆರೋಪಿ ವಿರುದ್ಧ ಪ್ರಕರಣದ ದಾಖಲಿಸಲಾಗಿತ್ತು. ಮುಂಬೈ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ರದ್ದುಗೊಳಿಸಿ ಎಂದು ಆರೋಪಿ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದನು. ಆರೋಪಿ ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್ ಟ್ರೈಯಲ್ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement