ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಿಕ್ಕನಗರಗಳ ಸಂಪರ್ಕಕ್ಕೆ 100 ವಿಮಾನನಿಲ್ದಾಣಗಳ ಸ್ಥಾಪನೆ: ಪ್ರಧಾನಿ

ದೇಶದಲ್ಲಿರುವ ಚಿಕ್ಕನಗರಗಳ ಸಂಪರ್ಕಕ್ಕೆ 2020ರೊಳಗೆ 100 ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ ಎಂದು...

Mainashree
Updated On : 21 Sept 2013, 6:42 am

ಕಿಶನ್‌ಗರ್: ದೇಶದಲ್ಲಿರುವ ಚಿಕ್ಕನಗರಗಳ ಸಂಪರ್ಕಕ್ಕೆ 2020ರೊಳಗೆ 100 ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಶನಿವಾರ ಹೇಳಿದ್ದಾರೆ.

ದೇಶ ಅಭಿವೃದ್ಧಿ ಆಗಬೇಕಾದರೆ ದೇಶದ ಚಿಕ್ಕ ಚಿಕ್ಕ ಹಳ್ಳಿಗಳ ಸಂಪರ್ಕ ಹೆಚ್ಚಿರಬೇಕು. ಪ್ರಸ್ತುತ ಚಿಕ್ಕ ಪ್ರದೇಶಗಳಿಗೆ ಭೇಟಿ ನೀಡಲು ಮತ್ತು ಮೂಲಸೌಲಭ್ಯ ಕಲ್ಪಿಸಲು ಸಂಪರ್ಕದ ವ್ಯವಸ್ಥೆ ಸರಿಯಾಗಿಲ್ಲ. ಇದರಿಂದ ಜನರು ಹಿಂದುಳಿದಿದ್ದಾರೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಚಿಕ್ಕ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

2020ರೊಳಗೆ 100 ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಈ ಮೊದಲು ಕೇವಲ ಮೆಟ್ರೋ ಸಿಟಿಗಳಲ್ಲಿ ಮಾತ್ರ ವಿಮಾನ ನಿಲ್ದಾಣವಿತ್ತು. ಆದರೆ ಇನ್ನೂ ಮುಂದೆ ತಾಲ್ಲೂಕು, ಚಿಕ್ಕ ನಗರಗಳಲ್ಲಿ ಚಿಕ್ಕ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆ ಹಾಕಲಾಗಿದೆ. ಇದರಿಂದ ಜನರ ಸಂಪರ್ಕ ಸರಾಗವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಈ ರೀತಿ ಚಿಕ್ಕ ಚಿಕ್ಕ ಪ್ರದೇಶಗಳಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿ, ಜನರ ಸಂಪರ್ಕ ಸರಾಗವಾಗುವುದು ಹಾಗೂ ಇದರಿಂದ ಸುಮಾರು 30 ಕೋಟಿ ಪ್ರಯಾಣಿಕರು ಹೆಚ್ಚಾಗುವ ಸಾಧ್ಯತೆ ಇದ್ದು, ದೇಶದ ಆರ್ಥಿಕತೆಯಲ್ಲಿ ಅಭಿವೃದ್ಧಿ ಕಾಣಲಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement