ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ತಾಲಿಬಾನ್ ಉಪನಾಯಕನ ಬಿಡುಗಡೆಗೊಳಿಸಿದ ಪಾಕ್

ತಾಲಿಬಾನ್‌ನ ಉಪನಾಯಕ ಮುಲ್ಲಾ ಅಬ್ದುಲ್ ಘನಿ ಬಾರಾದಾರ್‌ನನ್ನು ಪಾಕಿಸ್ತಾನ ಶನಿವಾರ...

Mainashree
Updated On : 21 Sept 2013, 3:14 am

ಇಸ್ಲಾಮಾಬಾದ್: ತಾಲಿಬಾನ್‌ನ ಉಪನಾಯಕ ಮುಲ್ಲಾ ಅಬ್ದುಲ್ ಘನಿ ಬಾರಾದಾರ್‌ನನ್ನು ಪಾಕಿಸ್ತಾನ ಶನಿವಾರ ಬಿಡುಗಡೆಗೊಳಿಸಿದೆ.

ಪಾಕಿಸ್ತಾನದ ಜೈಲಿನಲ್ಲಿದ್ದ ಆಫ್ಘಾನ ತಾಲಿಬಾನ್‌ನ ಉಪನಾಯಕ ಮುಲ್ಲಾ ಅಬ್ದುಲ್ ಘನಿ ಬಾರಾದಾರ್‌ನನ್ನು ಇಂದು ಬಿಡುಗಡೆಗೊಳಿಸಿದ್ದು, ಆತನಿಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಾರಾದಾರ್ ಮತ್ತು ಇತರೆ ಕೆಲವು ತಾಲಿಬಾನ್ ಉಗ್ರರನ್ನು ಬಿಡುಗಡೆಗೊಳಿಸಬೇಕೆಂದು ಆಫ್ಘಾನಿಸ್ಥಾನ ಬಹು ಕಾಲದಿಂದ ಪಾಕಿಸ್ತಾನಕ್ಕೆ ಒತ್ತಾಯಿಸಿತ್ತು.

ತಾಲಿಬಾನ್ ಬಂಡುಕೋರರನ್ನು ತನಗೆ ಹಸ್ತಾಂತರಿಸುವಂತೆ ಆಫ್ಘಾನ್ ಸರ್ಕಾರವು ಪಾಕ್‌ಗೆ ಮನವಿ ಮಾಡಿತ್ತು. ಆದರೆ ಪಾಕ್ ಸರ್ಕಾರವು ಬಾರಾದಾರ್ ಅವರನ್ನು ಯಾರ ವಶಕ್ಕೂ ನೀಡುವುದಿಲ್ಲ. ಅವರಿಗೆ ಪೂರ್ಣ ಭದ್ರತೆ ಕಲ್ಪಿಸಲಾಗಿದೆ. ಅವರು ಪಾಕಿಸ್ತಾನದಲ್ಲಿ ಪೂರ್ಣ ಸ್ವತಂತ್ರವಾಗಿರಬಹುದು ಹಾಗೂ ಅವರು ಇಚ್ಚಿಸುವವರ ಜೊತೆ ಮಾತನಾಡುಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದೆ.

2010ರಲ್ಲಿ ಕರಾಚಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಾರಾದಾರ್‌ನನ್ನು ಪಾಕಿಸ್ತಾನದ ಭದ್ರತಾ ಪಡೆ ಬಂಧಿಸಿತ್ತು. ಪಾಕ್ ಕಳೆದ ವರ್ಷದಿಂದ ಈವರೆಗೆ, 33 ಆಫ್ಘಾನ್ ಕಮಾಂಡರ್‌ಗಳನ್ನು ಬಿಡುಗಡೆಗೊಳಿಸಿದೆ.

ತಾಲಿಬಾನ್ ಮುಖಂಡ ಮುಲ್ಲಾ ಉಮರ್‌ನ ನಂತರದ ಪ್ರಬಲ ನಾಯಕ ಬಾರಾದಾರ್ ಎಂಬ ಪಟ್ಟ ಆತನಿಗಿತ್ತು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement