ಮೋದಿ ಯುವಜನತೆಗೆ ಆಯಸ್ಕಾಂತವಿದ್ದಂತೆ: ಸ್ಮೃತಿ ಇರಾನಿ
ಗುಜರಾತ್ ಮುಖ್ಯಮಂತ್ರಿ ಹಾಗೂ ಭಾರತೀಯ ಜತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾರತದ...
ತಂಪಾ: ಗುಜರಾತ್ ಮುಖ್ಯಮಂತ್ರಿ ಹಾಗೂ ಭಾರತೀಯ ಜತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾರತದ ಯುವಜನತೆಯ ಆಯಸ್ಕಾಂತವಿದ್ದಂತೆ ಎಂದು ಬಿಜೆಪಿ ಹಿರಿಯ ನಾಯಕರು ಶನಿವಾರ ಹೇಳಿದ್ದಾರೆ.
ತಂಪಾದಲ್ಲಿ ಆಯೋಜಿಸಲಾಗಿದ್ದ ಪಕ್ಷ ಪ್ರಚಾರ ಸಂದರ್ಭದಲ್ಲಿ ಬಿಜಿಪಿ ವಕ್ತಾರರಾದ ಸ್ಮೃತಿ ಇರಾನಿ ಅವರು, ನಮ್ಮ ಪಕ್ಷದಲ್ಲಿ ಅತ್ಯಂತ ಯುವ ಆಯಸ್ಕಾಂತವಿದೆ. ಅವರೇ ಮುಂಬರುವ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ಹೇಳಿದ್ದಾರೆ.
ದೇಶದ ಯುವಜನತೆಯ ಪ್ರತೀಕವೇ ಮೋದಿ ಎಂದ ಅವರು, ನಿಮಗೆ ಪ್ರತಿಭೆ ಇದ್ದರೆ, ಶ್ರಮಿಸುವ ಶಕ್ತಿ ಇದ್ದರೆ ನೀವು ಕೂಡ ಭಾರತದ ಮುಂದಿನ ಪ್ರಧಾನ ಮಂತ್ರಿಯಾಗಬಹುದು. ಈ ಎಲ್ಲಾ ಅರ್ಹತೆ ಮೋದಿ ಅವರಿಗಿದೆ ಎಂದು ತಿಳಿಸಿದ್ದಾರೆ.
2014 ಮುಂಬರುವ ಲೋಕಸಭಾ ಚುನಾವಣೆಗೆ ಭಾರತ ಮೂಲದ ಅಮೆರಿಕ ಸಮುದಾಯದವರ ಬೆಂಬಲ ಪಡೆಯುವ ಉದ್ದೇಶದಿಂದ ತಂಪಾದಲ್ಲಿ ಆಯೋಜಿಸಿದ್ದ ಪಕ್ಷ ಪ್ರಚಾರ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಯುವಜನತೆಯನ್ನು ಕುರಿತು ಮಾತನಾಡಿದ್ದು ಹೀಗೆ.