ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನೈರೋಬಿಯಾದ ದಾಳಿಯಲ್ಲಿ ಕೀನ್ಯಾ ಅಧ್ಯಕ್ಷರ ಕುಟುಂಬದವರು ಸಾವು

ನೈರೋಬಿಯಾದಲ್ಲಿ ಉಗ್ರರು ದಾಳಿ ಮಾಡಿರುವುದರನ್ನು ಖಂಡಿಸಿರುವ ಕೀನ್ಯಾದ ಅಧ್ಯಕ್ಷ ಉಹ್ರು ಕೆನ್ಯಟ್, ಘಟನೆಯಲ್ಲಿ ತಮ್ಮ ಕುಟಂಬದ...

Mainashree
Updated On : 22 Sept 2013, 3:06 am

ನೈರೋಬಿ: ನೈರೋಬಿಯಾದಲ್ಲಿ ಉಗ್ರರು ದಾಳಿ ಮಾಡಿರುವುದರನ್ನು ಖಂಡಿಸಿರುವ ಕೀನ್ಯಾದ ಅಧ್ಯಕ್ಷ ಉಹ್ರು ಕೆನ್ಯಟ್, ಘಟನೆಯಲ್ಲಿ ತಮ್ಮ ಕುಟಂಬದ ಸದಸ್ಯರು ಮೃತಪಟ್ಟಿದ್ದಾರೆ ಎಂದು ವಿಷಾಧಿಸಿದ್ದಾರೆ.

ನಿನ್ನೆ ನೈರೋಬಿಯಾದ ಮಾಲ್‌ವೊಂದರ ಮೇಲೆ ದಾಳಿ ಮಾಡಿದ ಉಗ್ರರು, ಅಲ್ಲಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಈವರೆಗೂ 43 ಜನರು ಸಾವನ್ನಪ್ಪಿದ್ದಾರೆ. ಉಗ್ರರ ಹಟ್ಟಹಾಸದ ವಿರುದ್ಧ ಕಿಡಿ ಕಾಡಿರುವ ಕೀನ್ಯಾದ ಅಧ್ಯಕ್ಷ, ಉಗ್ರರು ಎಲ್ಲಿ ಓಡಲು ಯತ್ನಿಸಿದರು, ಅವರನ್ನು ಬಿಡುವುದಿಲ್ಲ. ಅವರನ್ನು ಬೆನ್ನಟ್ಟಿ ಹಿಡಿದು ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.

ಮಾಲ್‌ನಲ್ಲಿ ಇನ್ನೂ ಉಗ್ರರು ಅವಿತುಕೊಂಡಿದ್ದು, ಅವರ ವಿರುದ್ಧ ಕೀನ್ಯಾದ ಭದ್ರತಾ ಸಿಬ್ಬಂದಿಗಳು ಹೋರಾಟ ನಡೆಸುತ್ತಿದ್ದಾರೆ. ಘಟನೆಯಲ್ಲಿ ಇಬ್ಬರು ಭಾರತೀಯರು, ಕೀನ್ಯಾ ಅಧ್ಯಕ್ಷರ ಕುಟುಂಬ ಸದಸ್ಯರು ಸೇರಿದಂತೆ ಅನೇಕರು ಮೃತಪಟ್ಟಿದ್ದಾರೆ.

ಉಗ್ರರ ಈ ಹಟ್ಟಹಾಸಕ್ಕೆ ಕಡಿವಾಣ ಹಾಕಬೇಕಾಗಿದೆ. ಇಂತಹ ಹೀನಾಯ ಕೃತ್ಯವನ್ನು ಮಾಡಿರುವ ಮಾಲ್‌ನಲ್ಲಿ ಅವಿತಿರುವ ಉಗ್ರರನ್ನು ಹಿಡಿದು ಕಠಿಣ ಶಿಕ್ಷೆ ನೀಡಲಾಗುವುದು. ಇನ್ನೂ ಮುಂದೆ ಉಗ್ರರ ಹಟ್ಟಹಾಸಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಕೀನ್ಯಾ ಅಧ್ಯಕ್ಷರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement