ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಸಿಸಿಐನಿಂದ ಕ್ರಿಕೆಟಿಗ ಅಜಿತ್ ಚಂಡಿಲಾಗೆ ಸಮನ್ಸ್

ಸ್ಪಾಟ್ ಫಿಕ್ಸಿಂಗ್ ಹಗರಣದ ಕಳಂಕ ಹೊತ್ತಿರುವ ರಾಜಸ್ಥಾನ್ ರಾಯಲ್ಸ್ ಆಟಗಾರ ಅಜಿತ್ ಚಂಡಿಲಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ...

Mainashree
Updated On : 22 Sept 2013, 4:19 am

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣದ ಕಳಂಕ ಹೊತ್ತಿರುವ ರಾಜಸ್ಥಾನ್ ರಾಯಲ್ಸ್ ಆಟಗಾರ ಅಜಿತ್ ಚಂಡಿಲಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾನುವಾರ ಸಮನ್ಸ್ ಜಾರಿ ಮಾಡಿದೆ.

ಸಮನ್ಸ್‌ಗೆ ಉತ್ತರಿಸುವಂತೆ ಚಂಡಿಲಾಗೆ ಬಿಸಿಸಿಐ ಸೂಚಿಸಿದೆ. ಸೆಪ್ಟೆಂಬರ್ 29ರಂದು ನವದೆಹಲಿಯಲ್ಲಿ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕ(ಎಸಿಎಸ್‌ಯು) ಮುಖ್ಯಸ್ಥ ರವಿ ಸ್ವಾಮಿ ಅವರನ್ನು ಚಂಡಿಲಾ ಭೇಟಿ ಮಾಡಲಿದ್ದಾರೆ.

ಚಂಡಿಲಾ ಅವರನ್ನು ಭೇಟಿ ಮಾಡಿದ ನಂತರ ಸ್ವಾಮಿ ಅವರು ಬಿಸಿಸಿಐಗೆ ವರದಿ ಸಲ್ಲಿಸಲಿದ್ದು, ಅದನ್ನು ಶಿಸ್ತು ಸಮಿತಿಗೆ ನೀಡಲಾಗುವುದು. ತದ ನಂತರ ಶಿಸ್ತು ಸಮಿತಿ ತೀರ್ಪು ನೀಡಲಿದೆ ಎಂದು ಮೂಲಗಳ ತಿಳಿಸಿವೆ. ವರದಿಗಳ ಪ್ರಕಾರ ಅಜಿತ್ ಚಂಡಿಲಾ ಅವರಿಗೆ ಅಜೀವ ನಿಷೇಧ ಹೇರಾಲಾಗುವುದು ಎಂದು ತಿಳಿದು ಬಂದಿದೆ

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಕ್ರಿಕೆಟಿಗ ಶ್ರೀಶಾಂತ್, ಅಜಿತ್ ಚಂಡಿಲಾ ಹಾಗೂ ಅಂಕಿತ್ ಚೌವ್ಹಾಣ್ ಸೇರಿದಂತೆ 11 ಬುಕ್ಕಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಮೋಖಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಸ್ತುತ ಚಂಡಿಲಾ ಶ್ರೀಶಾಂತ್ ಸೇರಿದಂತೆ ಕೆಲವು ಆರೋಪಿಗಳು ಜಾಮೀನನ ಮೇಲೆ ಹೊರಬಂದಿದ್ದಾರೆ. ಈಗಾಗಲೇ ಬಿಸಿಸಿಐ ಶ್ರೀಶಾಂತ್, ಅಂಕಿತ್ ಚೌವ್ಹಾಣ್ ಹಾಗೂ ಅಮಿತ್ ಸಿಂಗ್ ಅವರ ವಿರುದ್ಧ ಅಜೀವ ನಿಷೇಧ ಹೇರಿತ್ತು. ಆದರೆ ಅಂದು ನಡೆದ ಶಿಸ್ತು ಸಮಿತಿ ಸಭೆಯಲ್ಲಿ ಚಂಡಿಲಾ ಗೈರುಹಾಜರಾಗಿದ್ದರು. ಈ ಹಿನ್ನಲೆಯಲ್ಲಿ ಅವರ ಮೇಲೆ ಅಜೀವ ನಿಷೇಧ ಹೊರಡಿಸಿರಲಿಲ್ಲ.

ಪ್ರಕರಣದಲ್ಲಿ ಈ ಕ್ರಿಕೆಟ್ ಆಟಗಾರರ ಹೆಸರು ಕೇಳಿ ಬರುತ್ತಿದ್ದಂತೆ ಬಿಸಿಸಿಐ ಅವರನ್ನು ಅಮಾನತುಗೊಳಿಸಿತ್ತು. ಅಜಿತ್ ಚಂಡಿಲಾ ಬುಕ್ಕಿಗಳೊಂದಿಗೆ ನಡೆಸಿರುವ ದೂರವಾಣಿಗಳ ದಾಖಲೆಗಳನ್ನು ಸಂಗ್ರಹಿಸಿರುವ ಪೊಲೀಸರು ಈ ಬುಕ್ಕಿಗಳು ಭೂಗತ ಪಾತಕಿ ದಾವೂದ್ ಹಾಗೂ ಜಾವೆದ್ ಚೊಟಾನಿ ಜತೆ ನಿರಂತರ ಸಂಪರ್ಕ ಹೊಂದಿರುವುದು ಖಚಿತವಾಗಿದೆ ಎಂದು ತಿಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement