ಇಶ್ರತ್ ಪ್ರಕರಣ: ಗುಜರಾತ್ ಸಚಿವ ಪ್ರದೀಪ್ ಸಿನ್ಹಾ ವಿಚಾರಣೆ
ಅಹಮದಬಾದ್: ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಕಾನೂನು ಸಚಿವ ಪ್ರದೀಪ್ ಸಿನ್ಹಾ ಜಡೇಜಾ ಅವರನ್ನು ಕೇಂದ್ರ ತನಿಖಾ ದಳ(ಸಿಬಿಐ) ಸೋಮವಾರ ವಿಚಾರಣೆಗೊಳಪಡಿಸಿದೆ.
ಇದಲ್ಲದೇ ಪ್ರಕರಣ ಸಂಬಂಧ ಸಿಬಿಐ, ರಾಜ್ಯ ಪ್ರಧಾನ ವಕೀಲರಾದ ಕಮಲ್ ತ್ರಿವೇದಿ ಮತ್ತು ಮಾಜಿ ಸಚಿವ ಭೂಪೇಂದ್ರಸಿನ್ಹಾ ಚುಡಾಸಮ ಅವರಿಗೆ ನೋಟೀಸ್ ನೀಡಿದೆ.
ತಾವು ಬರುವ ಮುನ್ನು ನೀವೆ ಸಿಬಿಐ ಬಳಿ ಬಂದು ವಿಚಾರಣೆಗೆ ಸಹಕರಿಸಿ ಎಂದು ಕಮಲ್ ತ್ರಿವೇದಿ ಮತ್ತು ಭೂಪೇಂದ್ರ ಸಿನ್ಹಾ ಅವರಿಗೆ ಸಿಬಿಐ ಹೇಳಿದೆ. ನಕಲಿ ಎನ್ಕೌಂಟರ್ನಲ್ಲಿ ಕಾನೂನು ಸಚಿವರ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಲೇಜು ವಿದ್ಯಾರ್ಥಿನಿಯಾದ 19 ವರ್ಷ ವಯಸ್ಸಿನ ಇಶ್ರತ್, ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳ್ಳೈ, ಅಮ್ಜದ್ ಪಿಳ್ಳೈ ಮತ್ತು ಝೀಶಾನ್ ಜೊಹಾರ್ ಅವರುಗಳನ್ನು ಗುಜುರಾತ್ ಪೊಲೀಸರು ನಕಲಿ ಎನ್ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡಿದ್ದರು.
ಪ್ರಕರಣದ ತನಿಖೆ ನಡೆಸುವಂತೆ ಹೈಕೋರ್ಟ್ ಸಿಬಿಐಗೆ ಆದೇಶಿಸಿತ್ತು.