ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಗನ್ ಮೋಹನ್ ರೆಡ್ಡಿಗೆ ಜಾಮೀನು

ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷಗಳಿಂದ ಜೈಲು ವಾಸ ಅನುಭವಿಸುತ್ತಿದ್ದ ವೈಎಸ್ಸಾರ್ ಕಾಂಗ್ರೆಸ್ ಮುಖ್ಯಸ್ಥ...

Rashmi Kasaragodu
Updated On : 23 Sept 2013, 6:21 am

ನವದೆಹಲಿ:  ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷಗಳಿಂದ ಜೈಲು ವಾಸ ಅನುಭವಿಸುತ್ತಿದ್ದ ವೈಎಸ್ಸಾರ್ ಕಾಂಗ್ರೆಸ್ ಮುಖ್ಯಸ್ಥ ಜಗನ್‌ಮೋಹನ್ ರೆಡ್ಡಿ ಅವರಿಗೆ ಸೋಮವಾರ ಜಾಮೀನು ಸಿಕ್ಕಿದೆ.

ಜಗನ್ ಅವರು ಸೆಪ್ಟಂಬರ್ 11ರಂದು ಹೈದ್ರಾಬಾದ್‌ನ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಸೋಮವಾರ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್ 2 ಲಕ್ಷ ರು. ಜಾಮೀನು ಮುಚ್ಚಳಿಕೆ ಮೇರೆಗೆ ಬಂಧಮುಕ್ತಗೊಳಿಸಿದೆ. ಜಾಮೀನು ಲಭಿಸಿದರೂ ಜಗನ್ ಹೈದ್ರಾಬಾದ್ ಬಿಟ್ಟು ಹೊರಹೋಗುವಂತಿಲ್ಲ, ಸಮನ್ಸ್  ನೀಡಿದರೆ ಕೋರ್ಟ್‌ಗೆ ಹಾಜರಾಗಬೇಕು ಎಂಬ ಷರತ್ತು ಮೇರೆಗೆ ಜಗನ್‌ರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.


ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇರೆಗೆ ಕಳೆದ ವರ್ಷ ಮೇ 27ರಂದು ರೆಡ್ಡಿ ಅವರನ್ನು ಸಿಬಿಐ ಬಂಧಿಸಿತ್ತು. ಅನಂತರ ಅವರನ್ನು ಚಂಚಲಗುಡ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿತ್ತು.

ಮೇ 9ರಂದು ರೆಡ್ಡಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ರೆಡ್ಡಿ ಮೇಲಿನ ಆರೋಪದ ತನಿಖೆಯನ್ನು ಪೂರ್ಣಗೊಳಿಸಿ 4 ತಿಂಗಳುಗಳೊಳಗೆ ಆರೋಪಪಟ್ಟಿ ಸಲ್ಲಿಸುವಂತೆ ಸಿಬಿಐಗೆ ಆದೇಶ ನೀಡಿತ್ತು.

ಏತನ್ಮಧ್ಯೆ, ಜಗನ್‌ಗೆ ಜಾಮೀನು ಅನುಮತಿ ನೀಡಿದ ಸುದ್ದಿ ಕೇಳಿ ಜಗನ್ ಬೆಂಬಲಿಗರು ಕೋರ್ಟ್ ಹೊರಗಡೆ ಹರ್ಷಾಚರಣೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement