ದೆಹಲಿ ಗ್ಯಾಂಗ್ ರೇಪ್: ದೋಷಿಗಳನ್ನು ಕೋರ್ಟ್‌ಗೆ ಹಾಜರು ಪಡಿಸುವಂತೆ ವಾರೆಂಟ್
ಡಿಸೆಂಬರ್ 16ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ದೋಷಿಗಳ ವಿರುದ್ಧ ದೆಹಲಿ ಹೈಕೋರ್ಟ್ ಸೋಮವಾರ ವಾರೆಂಟ್ ...
ನವದೆಹಲಿ: ಡಿಸೆಂಬರ್ 16ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ದೋಷಿಗಳ ವಿರುದ್ಧ ದೆಹಲಿ ಹೈಕೋರ್ಟ್ ಸೋಮವಾರ ವಾರೆಂಟ್ ವಿಧಿಸಿದೆ.
ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿ ಗಲ್ಲು ಶಿಕ್ಷೆಗೊಳಗಾಗಿರುವ ಈ ನಾಲ್ವರು ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರು ಪಡಿಸಬೇಕೆಂದು ಹೈಕೋರ್ಟ್‌ನ ಏಕ ಪೀಠ ಸದಸ್ಯ ನ್ಯಾಯಮೂರ್ತಿ ರೇವಾ ಖೇಟ್ರಪ್ಪ ಆದೇಶಿಸಿದ್ದಾರೆ.
ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸಿರುವುದನ್ನು ದೃಢಪಡಿಸುವುದಕ್ಕಾಗಿ ಹೈಕೋರ್ಟ್ ನಾಲ್ವರು ಹತ್ಯಾಚಾರಿಗಳಿಗೆ ಪ್ರೊಡಕ್ಷನ್ ವಾರೆಂಟ್ ಜಾರಿ ಮಾಡಿದೆ.
ಅದೇ ವೇಳೆ ಈ ಬಗ್ಗೆ ವಿಚಾರಣೆಯನ್ನು ಕೋರ್ಟ್ ಮಂಗಳವಾರಕ್ಕೆ ಕಾಯ್ದಿರಿಸಿದೆ.