ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಜೆಪಿಯ ಹಳೆಯ ಮಿತ್ರ ಪಕ್ಷಗಳು ಎನ್‌ಡಿಎ ಜತೆ ಸೇರಲಿವೆ: ಪ್ರಸಾದ್

2014ರ ಚುನಾವಣೆಯಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದಾಗ ಬಿಜೆಪಿಯ ಹಳೆ ಮಿತ್ರ ಪಕ್ಷಗಳು ಎನ್‌ಡಿಎ ಜತೆ ಸೇರಲಿವೆ ಎಂದು ಬಿಜೆಪಿ...

Rashmi Kasaragodu
Updated On : 23 Sept 2013, 5:56 am

ನವದೆಹಲಿ: 2014ರ ಚುನಾವಣೆಯಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದಾಗ ಬಿಜೆಪಿಯ ಹಳೆ ಮಿತ್ರ ಪಕ್ಷಗಳು ಎನ್‌ಡಿಎ ಜತೆ ಸೇರಲಿವೆ ಎಂದು ಬಿಜೆಪಿ ಹೇಳಿದೆ.

ನವದೆಹಲಿಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ 2014ರ ಸಾರ್ವತ್ರಿಕ ಚುನಾವಣೆಯ ನಂತರ ಬಿಜೆಪಿಯ ಹಳೆಯ ಮಿತ್ರ ಪಕ್ಷಗಳು ಎನ್‌ಡಿಎ ಜತೆ ಸೇರುವ ಸಾಧ್ಯತೆಯಿದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು  ಬಿಜೆಪಿ ಜತೆ ಕೈಜೋಡಿಸಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಬಿಜೆಪಿ ಈ ರೀತಿ ಹೇಳಿಕೆ ನೀಡಿದೆ.

ಸದ್ಯದ ಪರಿಸ್ಥಿತಿಯಲ್ಲಿ ದೇಶವನ್ನು ರಕ್ಷಿಸಲು ಯುಪಿಎ ಸರ್ಕಾರವನ್ನು ಕೆಳಗಿಳಸಲೇ ಬೇಕಾಗಿದೆ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಭಾನುವಾರ ಹೇಳಿದ್ದರು. ಅದೇ ವೇಳೆ ಬಿಜೆಪಿ ಜತೆ ಕೈಜೋಡಿಸುವ ಬಗ್ಗೆ ಕೇಳಿದಾಗ, ಇಲ್ಲ ಎಂದು ಅವರು ಉತ್ತರಿಸಲಿಲ್ಲ.

ಆದಾಗ್ಯೂ, ಕಾಂಗ್ರೆಸ್‌ನ್ನು ಪರಾಭವಗೊಳಿಸುವುದೇ ನನ್ನ ಆದ್ಯತೆ ಎಂದು  ಚಂದ್ರಬಾಬು ನಾಯ್ಡು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement