ರಾಜ್ಯದಲ್ಲೂ ಮಾಟ-ಮಂತ್ರಕ್ಕೆ ಬ್ರೇಕ್
ರಾಜ್ಯದಲ್ಲೂ ಮಾಟ, ಮಂತ್ರ, ಪವಾಡ, ನರಬಲಿ ಹಾಗೂ ದೆವ್ವ ಬಿಡಿಸುವಂತಹ ಅನಿಷ್ಟ ಪದ್ಥತಿಗಳಿಗೆ ಬ್ರೇಕ್ ಹಾಕಲು..
ಬೆಂಗಳೂರು: ರಾಜ್ಯದಲ್ಲೂ ಮಾಟ, ಮಂತ್ರ, ಪವಾಡ, ನರಬಲಿ ಹಾಗೂ ದೆವ್ವ ಬಿಡಿಸುವಂತಹ ಅನಿಷ್ಟ ಪದ್ಥತಿಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ವಾಮಾಚಾರದ ವಿರುದ್ಧ ಕಠಿಣ ಕಾನೂನು ಜಾರಿಗೆ ಸರ್ಕಾರ ನಿರ್ಧರಿಸಿದೆ.
ಮಾಟ, ಮಂತ್ರ ಹಾಗೂ ಭೂತ ಬಿಡಿಸುವ ಹೆಸರಿನಲ್ಲಿ ಜನರಿಗೆ ವಂಚಿಸುವುದಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ರಚಿಸಲಾಗುವುದು. ಈ ಹೊಸ ಕಾನೂನು ಮಹಾರಾಷ್ಟ್ರಕ್ಕಿಂತ ಭಿನ್ನವಾಗಿರಲಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸೋಮವಾರ ತಿಳಿಸಿದ್ದಾರೆ.
ಕಳೆದು ತಿಂಗಳು ಮಹಾರಾಷ್ಟ್ರ ಸರ್ಕಾರ ಸಹ ಸುಗ್ರೀವಾಜ್ಞೆ ಮೂಲಕ ಮಾಟ-ಮಂತ್ರಕ್ಕೆ ನಿಷೇಧ ಹೇರಿತ್ತು.