ಸೋನಿಯಾ ಗಾಂಧಿ ಹೆಸರಲ್ಲಿ ರಾಂಗ್ಕಾಲ್ ; ತನಿಖೆ ಆರಂಭ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಧ್ವನಿಯನ್ನು ಅನುಕರಿಸಿ ಅನಾಮಿಕ ಮಹಿಳೆಯೊಬ್ಬರು ಅಟೋರ್ನಿ ಜನರಲ್ ...
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಧ್ವನಿಯನ್ನು ಅನುಕರಿಸಿ ಅನಾಮಿಕ ಮಹಿಳೆಯೊಬ್ಬರು ಅಟೋರ್ನಿ ಜನರಲ್ ಜಿಇ ವಹಾನ್ವಟಿ ಅವರಿಗೆ ದೂರವಾಣಿ ಮಾಡಿರುವ ಪ್ರಕರಣದ ಬಗ್ಗೆ ತನಿಖೆ ಆರಂಭವಾಗಿದೆ.
ಸೋನಿಯಾ ಗಾಂಧಿ ವೈದ್ಯಕೀಯ ಚಿಕಿತ್ಸೆಗಾಗಿ ನ್ಯೂಯಾರ್ಕ್ಗೆ ತೆರಳಿದ್ದ ವೇಳೆ ವಹಾನ್ವಟಿ ಅವರಿಗೆ ಈ ರಾಂಗ್ ಕಾಲ್ ಬಂದಿತ್ತು.
ರಾಂಗ್ ಕಾಲ್ ಬಗ್ಗೆ ಅಟೋರ್ನಿ ಜನರಲ್ ಅವರಿಂದ ನಮಗೆ ದೂರು ಲಭಿಸಿದ್ದು, ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆದಾಗ್ಯೂ, ರಾಂಗೆ ಕಾಲ್ ಮಾಡಿದ ಮಹಿಳೆ ಸೋನಿಯಾ ಗಾಂಧಿಯವರ ದನಿಯನ್ನೇ ಯಾಕೆ ಅನುಕರಿಸಿದರು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ಹೇಳಿದ್ದಾರೆ.
ಮಾತ್ರವಲ್ಲದೆ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾದ ಕೂಡಲೇ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.