ದೆಹಲಿಯಲ್ಲಿ ನಮೋ ಮೆಗಾ ರ್ಯಾಲಿಗೆ ಸಿದ್ಧತೆ
ಸೆಪ್ಟಂಬರ್ 29ರಂದು ದೇಶದ ರಾಜಧಾನಿ ನವದೆಹಲಿಯಲ್ಲಿ ನರೇಂದ್ರ ಮೋದಿಯವರ ಬೃಹತ್ ರ್ಯಾಲಿ ನಡೆಸಲು ಬಿಜೆಪಿ ನಿರ್ಧರಿಸಿದೆ...
ನವದೆಹಲಿ: ಸೆಪ್ಟಂಬರ್ 29ರಂದು ದೇಶದ ರಾಜಧಾನಿ ನವದೆಹಲಿಯಲ್ಲಿ ನರೇಂದ್ರ ಮೋದಿಯವರ ಬೃಹತ್ ರ್ಯಾಲಿ ನಡೆಸಲು ಬಿಜೆಪಿ ನಿರ್ಧರಿಸಿದೆ.
2014ರ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿಯವರ ಈ ರ್ಯಾಲಿಯಲ್ಲಿ ಸುಮಾರು 4 ಲಕ್ಷಕ್ಕಿಂತಲೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಹೇಳಿದೆ.
ನವದೆಹಲಿಯಲ್ಲಿ ನಡೆಯಲಿರುವ ಬೃಹತ್ ರ್ಯಾಲಿಗೆ ಬಿಜೆಪಿ ಸಿದ್ಧತೆ ಶುರು ಮಾಡಿದ್ದು, ರ್ಯಾಲಿಯ ನೇರ ಪ್ರಸಾರ ವೀಕ್ಷಿಸಲು ದೆಹಲಿಯ ಎಲ್ಲ ಭಾಗಗಳಲ್ಲೂ 100 ಎಲ್‌ಇಡಿ ಸ್ಕ್ರೀನ್‌ಗಳನ್ನಿಡಲಾಗುವುದು.
ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಮೋದಿ ಅವರನ್ನು ಆಯ್ಕೆ ಮಾಡಿದುದಕ್ಕೆ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿತ್ತು. ಈ ಆಂತರಿಕ ಅಸಮಾಧಾನಕ್ಕೆ ತೇಪೆ ಹಚ್ಚಲು ದೆಹಲಿಯಲ್ಲಿ ನಡೆಯುವ ಬೃಹತ್ ರ್ಯಾಲಿ ಸಹಾಯವಾಗುವುದು ಎಂಬ ನಿರೀಕ್ಷೆಯಲ್ಲಿದೆ ಬಿಜೆಪಿ.