ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನೈರೋಬಿ ಮಾಲ್ ದಾಳಿಗೆ ಕನ್ನಡಿಗ ಬಲಿ

ಮುಂಬೈ ಮಾದರಿಯಲ್ಲಿ ನೈರೋಬಿಯ ವೆಸ್ಟ್‌ಗೇಟ್ ಮಾಲ್ ಮೇಲೆ ನಡೆದ ಅಲ್‌ಶಬಾಬ್ ಉಗ್ರರ ದಾಳಿಯಲ್ಲಿ ಓರ್ವ ಕನ್ನಡಿಗ..

Lingaraj Badiger
Updated On : 24 Sept 2013, 3:55 am

ನೈರೋಬಿ: ಮುಂಬೈ ಮಾದರಿಯಲ್ಲಿ ನೈರೋಬಿಯ ವೆಸ್ಟ್‌ಗೇಟ್ ಮಾಲ್ ಮೇಲೆ ನಡೆದ ಅಲ್‌ಶಬಾಬ್ ಉಗ್ರರ ದಾಳಿಯಲ್ಲಿ ಓರ್ವ ಕನ್ನಡಿಗ ಮೃತಪಟ್ಟಿದ್ದಾರೆ. ಇದರೊಂದಿಗೆ ನೈರೋಬಿ ಮಾಲ್ ದಾಳಿಗೆ ಬಲಿಯಾದ ಭಾರತೀಯರ ಸಂಖ್ಯೆ ಇದೀಗ ಮೂರಕ್ಕೆ ಏರಿದೆ.

ವೆಸ್ಟ್‌ಗೇಟ್ ದಾಳಿಯಲ್ಲಿ ಮೃತಪಟ್ಟ ಭಾರತೀಯ ಸಂಖ್ಯೆ ಏರಿಕೆಯಾಗಿದ್ದು, ಮಂಗಳವಾರ ಪತ್ತೆಯಾದ ಮೃತದೇಹವನ್ನು ಬೆಂಗಳೂರಿನ ಸುದರ್ಶನ್ ಬಿ.ನಾಗರಾಜ್ ಎಂದು ಗುರುತಿಸಲಾಗಿದ್ದು, ಒಟ್ಟಾರೆ ಈವರಗೆ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 62ಕ್ಕೆ ಏರಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಸುದರ್ಶನ್ ಅವರು ಪುಸ್ತಕ ವ್ಯಾಪಾರಿಯಾಗಿದ್ದು, ಕಳೆದ ಸೆಪ್ಟೆಂಬರ್ 20ರಂದು ನೈರೋಬಿಗೆ ಆಗಮಿಸಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ಈ ಸಂಬಂಧ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದೆ.

ಈ ಮುಂಚೆ, ಉಗ್ರರ ದಾಳಿಯಲ್ಲಿ ತಮಿಳುನಾಡಿನ ಶ್ರೀಧರ್ ನಟರಾಜನ್(40) ಹಾಗೂ ಬ್ಯಾಂಕ್ ಆಫ್ ಬರೋಡಾದ ನೈರೋಬಿ ಶಾಖೆಯ ವ್ಯವಸ್ಥಾಪಕರ ಪುತ್ರ ಪರಮಶು ಜೈನ್(8) ಮೃತಪಟ್ಟ ದುರ್ದೈವಿಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement