ಮಗನ ವಿರುದ್ಧ ತಾಯಿ ದೂರು: ಡಿಎಂಡಿಕೆ ಶಾಸಕನ ಬಂಧನ
ಜಮೀನು ಕಿತ್ತುಕೊಂಡ ಆರೋಪದ ಮೇಲೆ ತಿರುಪರಂಕುರಂ ವಿಧಾನಸಭಾ ಕ್ಷೇತ್ರದ ಡಿಎಂಡಿಕೆ ಶಾಸಕ ಎ.ಕೆ.ಟಿ.ರಾಜಾ..
ಮಧುರೈ: ಜಮೀನು ಕಿತ್ತುಕೊಂಡ ಆರೋಪದ ಮೇಲೆ ತಿರುಪರಂಕುರಂ ವಿಧಾನಸಭಾ ಕ್ಷೇತ್ರದ ಡಿಎಂಡಿಕೆ ಶಾಸಕ ಎ.ಕೆ.ಟಿ.ರಾಜಾ ಅವರನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಪಿತ್ರಾರ್ಜಿತವಾಗಿ ಬಂದ 50 ಎಕರೆ ಆಸ್ತಿಯನ್ನು ತಮ್ಮಿಂದ ಬಲವಂತವಾಗಿ ಕಿತ್ತುಕೊಂಡು, ತನ್ನನ್ನು ಮನೆಯಿಂದ ಹೊರ ಹಾಕಿದ್ದಾನೆ ಎಂದು ಆರೋಪಿಸಿ ಶಾಸಕರ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶಾಸಕ ರಾಜಾ ಅವರು ತಮ್ಮ ತಾಯಿಗೆ ಒಬ್ಬನೇ ಮಗನಾಗಿದ್ದು, ಐವರು ಸಹೋದರಿಯರನ್ನು ಹೊಂದಿದ್ದಾರೆ. ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.