ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಆರ್‌ಎಸ್‌ಎಸ್‌ಗೂ ಅರ್ಥವಾಗಿಲ್ಲ: ಅನಂತಮೂರ್ತಿ

ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ..

Lingaraj Badiger
Updated On : 24 Sept 2013, 1:16 am

ಬೆಂಗಳೂರು: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಮಂಗಳವಾರ ಮತ್ತೆ ವಾಗ್ದಾಳಿ ನಡೆಸಿರುವ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, ಮೋದಿ ಆರ್‌ಎಸ್‌ಎಸ್‌ಗೂ ಅರ್ಥವಾಗದ ವ್ಯಕ್ತಿ ಎಂದಿದ್ದಾರೆ.

ಇಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅನಂತಮೂರ್ತಿ, ಈಗಿನ ರಾಜಕೀಯ ಮಾಹಾಭಾರತ ಇದ್ದಂತೆ. ರಾಜಕಾರಣಿಗಳಿಗೆ ವಿವೇಕ ಇರಬೇಕು. ವಿವೇಕದಿಂದ ಆಲೋಚಿಸಿದರೆ ಮಾತ್ರ ರಾಜಕೀಯದಲ್ಲಿ ಹೊಸತನ ಕಂಡುಕೊಳ್ಳಲು ಸಾಧ್ಯ. ಆದರೆ ನಮ್ಮ ರಾಜಕಾರಣಿಗಳಿಗೆ ವಿವೇಕ ಹಾಗೂ ಪ್ರಜ್ಞೆ ಎರಡೂ ಇಲ್ಲ ಎಂದಿದ್ದಾರೆ.

ಕೋಮು ಗಲಭೆಯಂತಹ ಸಾಮೂಹಿಕ ಹಿಂಸಾಚಾರ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚುವುದು ಕಷ್ಟ ಎಂದಿರುವ ಅನಂತಮೂರ್ತಿ, ಗೋಧ್ರಾ ಹಾಗೂ ಸಿಖ್ ಹತ್ಯಾಕಾಂಡವನ್ನು ತಾವು ವಿರೋಧಿಸುವುದಾಗಿ ಹೇಳಿದ್ದಾರೆ.

ಪ್ರಾಚೀನ ಕಾಲದಲ್ಲಿ ಯಜ್ಞಕುಂಡದಲ್ಲಿ ಗೋವಧೆ ನಡೆಯುತ್ತಿತ್ತು. ಬ್ರಾಹ್ಮಣರೇ ಗೋವುಗಳನ್ನು ಬಲಿ ಕೊಡುತ್ತಿದ್ದರು ಎಂದಿರುವ ಅನಂತಮೂರ್ತಿ, ಪ್ರಾಚೀನ ಕಾಲದಲ್ಲಿನ ಹಿಂದೂ ಧಾರ್ಮಿಕತೆ ನಮಗೆ ಅರ್ಥವಾಗಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ, ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅನಂತಮೂರ್ತಿ, ಸಿದ್ದರಾಮಯ್ಯ ಕಾಂಗ್ರೆಸೇತರ ಮುಖ. ಹೀಗಾಗಿ ನಾನು ಅವರನ್ನು ಬೆಂಬಲಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲು ಸಮರ್ಥ ವ್ಯಕ್ತಿ ಅಲ್ಲ, ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಅನಂತಮೂರ್ತಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement