ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪತ್ನಿಯಿಂದಲೇ ಜೀವನಾಂಶ ಕೇಳಿದ ದುನಿಯಾ ವಿಜಿ

ನಟ ದುನಿಯಾ ವಿಜಯ್ ಹಾಗೂ ನಾಗರತ್ನ ವಿವಾಹ ವಿಚ್ಛೇದನ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದ್ದು,..

Lingaraj Badiger
Updated On : 25 Sept 2013, 1:52 am

ಬೆಂಗಳೂರು: ನಟ ದುನಿಯಾ ವಿಜಯ್ ಹಾಗೂ ನಾಗರತ್ನ ವಿವಾಹ ವಿಚ್ಛೇದನ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಪತ್ನಿಯಿಂದಲೇ ಜೀವನಾಂಶ ಕೇಳಿ ವಿಜಿ ನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಬುಧುವಾರ ಅರ್ಜಿ ಸಲ್ಲಿಸಿದ್ದಾರೆ.

ನಾನು ಕಟ್ಟಿರುವ ಮನೆ ಪತ್ನಿ ನಾಗರತ್ನ ಹೆಸರಿನಲ್ಲಿ ಇದೆ. ಅಲ್ಲದೆ ಜಯಮ್ಮನ ಮಗ ಚಿತ್ರವೂ ಪತ್ನಿ ಹೆಸರಿನಲ್ಲಿ ನಿರ್ಮಾಣವಾಗಿದ್ದು, ಅದರ ಲಾಭವೂ ಪತ್ನಿ ಅಕೌಂಟ್‌ಗೆ ಹೋಗುತ್ತಿರುವುದರಿಂದ ತಮಗೆ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ ಎಂದು ವಿಜಯ ಅರ್ಜಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪತ್ನಿ ಹೆಸರಿನಲ್ಲಿ ಇಟ್ಟಿಗೆ ಕಾರ್ಖಾನೆ ಆರಂಭಿಸಿದ್ದೇನೆ. ಸೀರೆ ವ್ಯಾಪರವೂ ಪತ್ನಿ ಹೆಸರಿನಲ್ಲೇ ನಡೆಯುತ್ತಿದೆ. ಎರಡರಿಂದಲೂ ಐದು ಲಕ್ಷ ರುಪಾಯಿ ಆದಾಯ ಬರುತ್ತಿದೆ. ಹೀಗಾಗಿ ನನಗೆ ಜೀವನಾಂಶ ನೀಡಬೇಕು ಎಂದು ವಿಜಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement