2ಜಿ ಹಗರಣ: ನಾಳೆ ಜೆಪಿಸಿ ಸಭೆ
ನವದೆಹಲಿ: 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಧಿಸಿದಂತೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯ ಸಭೆ ಶುಕ್ರವಾರ ನಡೆಯಲಿದೆ.
2ಜಿ ಸ್ಪೇಕ್ಟ್ರಾಂ ಹಗರಣಕ್ಕೆ ಸಂಬಂಧಿಸಿದಂತೆ ಜೆಪಿಸಿ, ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕ್ಲೀನ್ಚಿಟ್ ನೀಡಿರುವುದು ಅನೇಕ ವಿವಾದಗಳನ್ನುಂಟುಮಾಡಿತ್ತು. ಈ ಸಂಬಂಧ ನಾಳೆ ಜೆಪಿಸಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಜೆಪಿಸಿ ಸಲ್ಲಿಸಿರುವ ಕರಡು ವರದಿಯಲ್ಲಿ ಪ್ರಧಾನಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಹಗರಣದಲ್ಲಿ ಮಾಜಿ ದೂರಸಂಪರ್ಕ ಸಚಿವ ಎ. ರಾಜ ಅವರ ಪಾತ್ರದ ಬಗ್ಗೆ ಉಲ್ಲೇಖಿಸಿರುವ ವರದಿ ಇದರಲ್ಲಿ ಪ್ರಧಾನಿ ಸಿಂಗ್ ಹಾಗೂ ಚಿದು ಅವರ ತಪ್ಪಿಲ್ಲ ಎಂದಿತ್ತು. ಇದಕ್ಕೆ ಯುಪಿಎ ಮಿತ್ರಪಕ್ಷ ಎನ್ಸಿಪಿ ಸೇರಿದಂತೆ ಪ್ರತಿಪಕ್ಷವಾದ ಬಿಜೆಪಿ, ಡಿಎಂಕೆ, ಜೆಡಿ(ಯು) ವಿರೋಧ ವ್ಯಕ್ತಪಡಿಸಿದ್ದವು.
ಪ್ರಕರಣದಲ್ಲಿ ಎ. ರಾಜ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದವು. ಈ ಹಿನ್ನಲೆಯಲ್ಲಿ ಜೆಪಿಸಿ ನಾಳೆ ಸಭೆ ಸೇರಿ ಚರ್ಚೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.