ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜನಸಾಮಾನ್ಯರು ಹಸಿವಿನಿಂದ ಬಳಲಬಾರದು: ರಾಹುಲ್

Mainashree
Updated On : 26 Sept 2013, 4:07 am

ಜಗದಲ್‌ಪುರ್: ಜನಸಾಮಾನ್ಯರು ಹಸಿವಿನಿಂದ ಬಳಲಬಾರದು ಎಂಬುದೇ ನಮ್ಮ ಪಕ್ಷದ ಉದ್ದೇಶ ಎಂದು ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

ಇಂದು ಚತ್ತೀಸ್‌ಗಡ್‌ನ ಬಸ್ತಾರ್ ವಲಯದಲ್ಲಿ ಕೈಗೊಂಡಿದ್ದ ಕಾಂಗ್ರೆಸ್ ರ್ಯಾಲಿಯಲ್ಲಿ ಮಾತಾನಡಿದ ಅವರು, ಜನ ಸಾಮನ್ಯರು ಹಸಿವನ್ನು ತಡೆಯುವುದು ಹಾಗೂ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ನಮ್ಮ ಪಕ್ಷದ ನಿಲುವು ಎಂದು ತಿಳಿಸಿದ್ದಾರೆ.

ಬುಡಕಟ್ಟು ಜನಾಂಗದ ಯುವಜನತೆ ಕೂಡ ರಾಜಕೀಯ ಸೇರ್ಪಡೆಗೊಳ್ಳಬಹುದು, ನಾನು ನಿಮಗೆ ಬೆಂಬಲಿಸುತ್ತೇನೆ. ಮಾಹಿತಿ ಹಕ್ಕು ಕಾಯ್ದೆ ತರವುಲ್ಲಿ ನಮ್ಮ ಪಕ್ಷ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ, ಇದರಿಂದ ಜನರು ಸರ್ಕಾರವನ್ನು ಯಾವುದೇ ಪ್ರಶ್ನೆ ಕೇಳಬಹುದಾಗಿದೆ ಎಂದು ರಾಹುಲ್ ಹೇಳಿದ್ದಾರೆ.

ನಮ್ಮ ಹೋರಾಟ ಜನಸಾಮಾನ್ಯರಿಗಾಗಿ, ಬಡವರಿಗಾಗಿ, ಹಾಗೂ ಹಿಂದುಳಿದ ವರ್ಗಗಳಿಗಾಗಿ. ಪ್ರತಿಯೊಬ್ಬರನ್ನು ಉದ್ಯೋಗಶೀಲರನ್ನಾಗಿ ಮಾಡುವುದೇ ನಮ್ಮ ಗುರಿ.

ಚತ್ತೀಶ್‌ಗಢ್ ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯರಿದ್ದಾರೆಯೇ? ಕರಳು ಬೇನೆಯಿಂದ ಎಷ್ಟು ಜನರು ಮೃತಪಟ್ಟಿದ್ದಾರೆ ಎಂದು ತಿಳಿದಿದೆಯೇ ಎಂದು ಜನರನ್ನು ಪ್ರಶ್ನೆ ಮಾಡಿದ ರಾಹುಲ್, ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗದರೆ, ಮೊದಲು ಶಿಕ್ಷಣ ಪಡೆಯಬೇಕು, ತಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕು ಎಂದು ರಾಹುಲ್ ಕಿವಿ ಮಾತು ಹೇಳಿದ್ದಾರೆ.

ಬುಡಕಟ್ಟು ಜನಾಂಗದವರಿಗೆ ಮಾನ್ಯವಾಗುವಂತಹ ಕೃಷಿ ಭೂಮಿಯನ್ನು ನಿಮಗೆ ಮೀಸಲಿಡುವಂತಹ ಬುಡಕಟ್ಟು ಬಿಲ್‌ನ್ನು ಜಾರಿಗೊಳಿಸಲಾಗಿದೆ. ಇಲ್ಲಿನ ಪರಿಸ್ಥಿತಿ ನೋಡಿದರೆ 2000 ಜನರಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ 12ನೇ ತರಗತಿ ಉತ್ತೀರ್ಣವಾಗಿರುವುದು ತಿಳಿದು ಬಂದಿದೆ. ಅಂದರೆ ಇಲ್ಲಿನ ಸರ್ಕಾರ ಯಾವ ರೀತಿಯಲ್ಲಿ ರಾಜ್ಯ ನಡೆಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಆದ್ದರಿಂದ ಜನ ಸಾಮಾನ್ಯರಿಗೆ ಶಕ್ತಿ ನೀಡಬೇಕು, ಅಧಿಕಾರ ನೀಡಬೇಕು. ಹಸಿವಿನಿಂದ ಜನಸಾಮಾನ್ಯ ಬಳಲಬಾರದು ಹಾಗೂ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಈ ಹಾದಿಯಲ್ಲಿ ನಮ್ಮ ಪಕ್ಷ ಮುಂದಿದೆ ಎಂದು ರಾಹುಲ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement