ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಾಗ್ಧಾದ್‌ನಲ್ಲಿ ಬಾಂಬ್ ಸ್ಫೋಟ: 21 ಸಾವು

Mainashree
Updated On : 26 Sept 2013, 6:16 am

ಬಾಗ್ಧಾದ್: ಶಾಪರ್ಸ್ ಮಾರುಕಟ್ಟೆಯ ಮೇಲೆ ಬಾಂಬ್ ದಾಳಿ ನಡೆಸಿದ ಪರಿಣಾಮ 21 ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಬಾಗ್ಧಾದ್‌ನಲ್ಲಿ ನಡೆದಿದೆ.

ಸಾವಿರಾರು ಜನರು ನೆರೆದಿದ್ದ ಮಾರುಕಟ್ಟೆಗೆ ಕಿಡಿಗೇಡಿಗಳು ಬಾಂಬ್ ಎಸೆದ ಪರಿಣಾಮ ಬಾಂಬ್ ಸ್ಫೋಟಗೊಂಡು ಸ್ಥಳದಲ್ಲೇ 21 ಜನ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

21 ಜನರ ಪೈಕಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗ್ಧಾದನ ನೆರೆ ಪ್ರದೇಶವಾದ ದೋರಾ ಎಂಬಲ್ಲಿ ಕೆಲವೇ ಘಂಟೆಗಳ ಹಿಂದೆ ಬಾಂಬ್ ಸ್ಫೋಟಗೊಂಡಿತ್ತು. ಇಬ್ಬರು ಮಹಿಳೆಯರು ಸೇರಿದಂತೆ 7 ಜನರು ಸಾವನ್ನಪ್ಪಿ, 17 ಜನರು ಗಾಯಗೊಂಡಿದ್ದರು. ಇದಾದ ಕೆಲವೇ ಗಂಟೆಗಳ ಬಳಿಕ ಬಾಗ್ಧಾದ್‌ನಲ್ಲಿ ಕಿಡಿಗೇಡಿಗಳು ಬಾಂಬ್ ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ಇರಾಕ್‌ನ ಹಲವು ಪ್ರದೇಶಗಳಲ್ಲಿ ಬಾಂಬ್ ದಾಳಿ ನಡೆಯುತ್ತಿದ್ದು, ಕೆಲವೇ ತಿಂಗಳಲ್ಲಿ 4000 ಜನರು ಬಾಂಬ್ ದಾಳಿಗೆ ತುತ್ತಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement