2ಜಿ ಹಗರಣ: ಪ್ರಧಾನಿ, ಚಿದುಗೆ ಕ್ಲೀನ್ ಚಿಟ್
2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸಚಿವ ಚಿದಂಬರಂ...
ನವದೆಹಲಿ: 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸಚಿವ ಚಿದಂಬರಂ ಅವರಿಗೆ ಶುಕ್ರವಾರ ಕ್ಲೀನ್ ಚಿಟ್ ನೀಡಿದೆ.
2011ರ ಫೆಬ್ರವರಿಯಲ್ಲಿ ರಚನೆಯಾದ ಜೆಪಿಸಿ ಇಂದು ಸೇರಿದ್ದ ಸಭೆಯಲ್ಲಿ ಕರಡು ವರದಿಯನ್ನು ಅಂಗೀಕರಿಸಿದೆ. ಏಪ್ರಿಲ್ 2013ರಿಂದಲೂ ಈ ವರದಿಯೂ ಸಮಿತಿಯ ಅಂಗೀಕಾರಕ್ಕಾಗಿ ಕಾಯುತ್ತಿತ್ತು. ಆದರೆ ಪ್ರತಿಪಕ್ಷ ಸದಸ್ಯರು ವಿರೋಧದ ಒಡ್ಡಿದ್ದರು. ಆದರೆ ಅಂಗೀಕಾರಕ್ಕೆ ಹೆಚ್ಚು ಸದಸ್ಯರ ಒಪ್ಪಿಗೆ ಸಿಕ್ಕಿದ್ದರಿಂದ ಪ್ರಧಾನಿ ಮತ್ತು ಚಿದು ಕ್ಲೀನ್ ಚಿಟ್ ನೀಡಲಾಗಿದೆ.
ಹಗರಣದಲ್ಲಿ ದೂರಸಂಪರ್ಕ ಮಾಜಿ ಸಚಿವ ಎ. ರಾಜಾ ಅವರ ಪಾತ್ರದ ಬಗ್ಗೆ ಉಲ್ಲೇಖಿಸಿರುವ ವರದಿಯು ಇದರಲ್ಲಿ ಪ್ರಧಾನಿ ಸಿಂಗ್ ಹಾಗೂ ಚಿದು ಅವರ ತಪ್ಪಿಲ್ಲ ಎಂದಿತ್ತು.
ಜೆಪಿಸಿಯಲ್ಲಿರುವ 30 ಸದಸ್ಯರಲ್ಲಿ 16 ಸದಸ್ಯರು ಅಂಗೀಕಾರಕ್ಕೆ ಒಪ್ಪಿಗೆ ಸೂಚಿಸಿದ್ದು, 11 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಕರಡು ವರದಿ ಅಂಗೀಕಾರ ಮಾಡಲಾಗುತ್ತಿದೆ ಎಂದು ಜೆಪಿಸಿ ಅಧ್ಯಕ್ಷ ಕಾಂಗ್ರೆಸ್ ನಾಯಕ ಪಿಸಿ ಚಾಕೋ ಹೇಳಿದ್ದಾರೆ.