ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಂಬೈಯಲ್ಲಿ ಕಟ್ಟಡ ಕುಸಿತ; 5 ಸಾವು

ಮುಂಬೈಯ ನೌಕಾಂಗಣದ ಬಳಿಯಿರುವ 5 ಅಂತಸ್ತಿನ ಕಟ್ಟಡ ಶುಕ್ರವಾರ ಕುಸಿದು ಬಿದ್ದು, 5 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ....

Rashmi Kasaragodu
Updated On : 27 Sept 2013, 3:43 am

ಮುಂಬೈ:  ಮುಂಬೈಯ ನೌಕಾಂಗಣದ ಬಳಿಯಿರುವ 5 ಅಂತಸ್ತಿನ ಕಟ್ಟಡ ಶುಕ್ರವಾರ ಕುಸಿದು ಬಿದ್ದು, 5 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ರಕ್ಷಣಾ ಕಾರ್ಯಗಳು ಮುಂದುವರಿದಿದ್ದರೂ, ಸುಮಾರು 40 ಜನ ಈ ಕಟ್ಟಡದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮರಾಠಿ ಪತ್ರಿಕೆಯೊಂದರ ವರದಿಗಾರನೊಬ್ಬ ಈ ಕಟ್ಟಡದಲ್ಲಿ ಸಿಲುಕಿಕೊಂಡಿರುವುದಾಗಿ ಬಲ್ಲಮೂಲಗಳು ವರದಿ ಮಾಡಿವೆ.

ಮುಂಬೈಯ ನೌಕಾಂಗಣ ರೇಲ್ವೇ ಸ್ಟೇಷನ್ ಬಳಿಯಿರುವ ಕಟ್ಟಡವು ಶುಕ್ರವಾರ ಬೆಳಗ್ಗೆ 6 ಗಂಟೆಗೆ ಕುಸಿದಿದೆ. 1980ರಲ್ಲಿ ನಿರ್ಮಿಸಿದ ಕಟ್ಟಡವಾಗಿದೆ ಇದು. ಕಟ್ಟಡ ಕುಸಿದು ಬೀಳುವ ಸ್ಥಿತಿಯಲ್ಲಿ ಇದ್ದುದರಿಂದ ಈ ಮೊದಲೇ ನೋಟೀಸ್ ಕೂಡಾ ಕಳುಹಿಸಲಾಗಿತ್ತು.

ಸುಮಾರು 28 ಕೋಣೆಗಳಿರುವ ಪ್ರಸ್ತುತ ಕಟ್ಟಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಸಿ ನೌಕರರು ಮತ್ತು ಅವರ ಕುಟುಂಬ ವಾಸಿಸುತ್ತಿದ್ದರು.

ಘಟನಾ ಸ್ಥಳದಲ್ಲಿ 12 ಅಗ್ನಿ ಶಾಮಕ ದಳ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಗಾಯಗೊಂಡ 16 ಮಂದಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಕಟ್ಟಡದೊಳಗೆ ಸಿಲುಕಿರುವ ವ್ಯಕ್ತಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement